ಶಾಸಕರ ನೇತೃತ್ವದಲ್ಲಿ ನಡೆದ ಕಿಟ್ಟ್ ವಿತರಣೆಗೆ ಆಗಮಿಸಿದ ಗೃಹಸಚಿವ ಬಸವರಾಜ್ ಬೊಮ್ಮಾಯಿ

ಉಜಿರೆ: ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ಇಂದು ತಾಲೂಕಿನ 81 ಗ್ರಾಮಗಳ 241 ಬೂತ್‌ಗಳಿಗೆ ವಿತರಣೆ ಮಾಡಿದ ಆಹಾರದ ಕಿಟ್ಟ್ ಗಳ ವಿತರಣೆ ನಡೆಯುತ್ತಿರುವ ಉಜಿರೆ ಶ್ರೀ ರತ್ನವರ್ಮ ಕ್ರೀಡಾಂಗಣಕ್ಕೆ ಭೇಟಿ ನೀಡಿದ ರಾಜ್ಯದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಸಾಂಕೇತಿಕವಾಗಿ ಫಲಾನುಭವಿಗಳಿಗೆ ಕಿಟ್ಟ್ ವಿತರಿಸಿದರು. 

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಯೋಗ್ಯ ಮತ್ತು ಮಾದರಿ ಶಾಸಕ: ಬಸವರಾಜ್ ಬೊಮ್ಮಾಯಿ
ಹರೀಶ್ ಪೂಂಜ ಅವರು ಸದಾಕಾಲಾ ಸಮಾಜಮುಖಿ ಕೆಲಸ ಮಾಡುವ ಓರ್ವ ಅತ್ಯಂತ ಯೋಗ್ಯ ಮತ್ತು ಮಾದರಿ ಶಾಸಕ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ನಾನು ಎರಡನೆ ಬಾರಿ ಈ ಮೈದಾನಕ್ಕೆ ಬರುತ್ತಿದ್ದೇನೆ. ಕಳೆದ ಬಾರಿ ನೆರೆಯಲ್ಲಿ ಒಳ್ಳೆ ಕೆಲಸ ದೊಡ್ಡ ಸಭೆ ಮಾಡಿದ್ದರು. ಇದೀಗ ಕೊರೊನಾದಲ್ಲೂ ಮತ್ತೆ ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಓಡಿಸಬೇಕಾದರೆ ತಂತಹಾ ಸಮಾಜಮುಖಿ ಜನಪ್ರತಿನಿಧಿಗಳು ಮತ್ತು ಅವರ ಜೊತೆಗಿರುವ ಎಲ್ಲತಂಡ, ಶಕ್ತಿಕೇಂದ್ರ, ಮಂಡಲ, ಎಲ್ಲಾ ಸದಸ್ಯರು ಬೂತ್‌ಮಟ್ಟದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ.
ಎಲ್ಲರೂ ಸೇರಿ ಇದನ್ನು ಎದುರಿಸಬೇಕು ಎಂಬುದು ಗೊತ್ತಿರುವಂತಹಾ ವಿಚಾರ. ಪ್ರಧಾನ ಮಂತ್ರಿಗಳೂ ಇದನೇ ಹೇಳಿದ್ದಾರೆ. ಅದಾಗ್ಯೂ ಕೂಡ ಕೆಲವರು ಅಸಹಕಾರ ರೀತಿಯಲ್ಲಿ ನಡೆದುಕೊಂಡು ವಿರೋಧ ಮಾಡುವುದರಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ನಿಯಮಗಳನ್ನು ತಂದಿದೆ. ಅದನ್ನು ಕಠೋರವಾಗಿ ಕಟ್ಟುನಿಟ್ಟಿನ ಜಾರಿ ಮಾಡುತ್ತೇವೆ.
ಮೊನ್ನೆ ನಡೆದ ಹಲವಾರು ಘಟನೆಗಳಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದೇವೆ. ಮುಂದೆ ಇಂತಹಾ ಘಟನೆ ಮರುಕಳಿಸದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ. ಈಗಾಗಲೇ ಹಿರಿಯ ಪೊಲೀಸ್ ಅಧಿಕಾರಿಗಳಿ ಸೂಚನೆ ನೀಡಿದ್ದೇನೆ. ಆ ಕಾನೂನನ್ನು ಅತ್ಯಂತ ಬಿಗಿಯಾಗಿ ಜಾರಿಗೊಳಿಸಬೇಕೆಂದೂ, ಯಾರಾದರೂ ಉಲ್ಲಂಘನೆ ಮಾಡಿದರೆ ಕೇಸು ಹಾಕಬೇಕು ಎಂದು ಆದೇಶ ನೀಡಿದ್ದೇವೆ ಎಂದರು.
ಪ್ರಧಾನಿ ಜೊತೆ ಮಾತುಕತೆ ಬಳಿಕ ಲಾಕ್‌ಡೌನ್ ಬಗ್ಗೆ ಮುಂದಿನ ತೀರ್ಮಾನ:
ಗ್ರೀನ್‌ಝೋನ್‌ಗಳಲ್ಲಿ ಕೇಂದ್ರ ಸರಕಾರದ ಆದೇಶದಂತೆ ಕೃಷಿ ಮತ್ತು ಸಣ್ಣ ಕೈಗಾರಿಕೆ, ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಖಾತರಿ ಕೆಲಸಗಳು, ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿಗಳಿಗೆ ಅವಕಾಶ ನೀಡಿದ್ದೇವೆ. ಮುಂದೆ 3 ನೇ ತಾರೀಖಿನವರೆಗೆ ಪರಿಸ್ಥಿತಿನೋಡಿಕೊಂಡು ಈ ಸಂದರ್ಭಕ್ಕೆ ಕರ್ನಾಟಕದಲ್ಲಿ ನಿಯಂತ್ರಣ ಆಗುವ ಲಕ್ಷಣಗಳು 3-4 ದಿವಸಗಳಿಂದ ಇದೆ. ಹೀಗೆ ಮುಂದುವರಿದರೆ ಏ. 27 ರಂದು ಪ್ರಧಾನಿಗಳು ಎಲ್ಲ ಮುಖ್ಯಮಂತ್ರಿಗಳ ಜೊತೆ ವೀಡಿಯೋ ಕಾನ್ಫರೆನ್ಸ್ ಮಾಡಿ ಏನು ಸೂಚನೆಗಳನ್ನು ಕೊಡುತ್ತಾರೆ ಆ ಪ್ರಕಾರ ಮುಂದಿನ ನಿರ್ಧಾರ ತೆಗೆದುಕೊಳ್ತೇವೆ ಎಂದು ಗೃಹಸಚಿವರು ತಿಳಿಸಿದರು.

ಈ ಸಂದರ್ಭ ವ್ಯವಸ್ಥೆ ಬಗ್ಗೆ ಮಾತನಾಡಿದ ಶಾಸಕ ಹರೀಶ್ ಪೂಂಜ ಅವರು, ಬಿಜೆಪಿ ಮಂಡಲ, ಪದಾಧಿಕಾರಿಗಳು, ಬೂತ್ ಸಮಿತಿ ಅಧ್ಯಕ್ಷರು ಮತ್ತು ಕಾರ್ಯಕರ್ತರ ಮೂಲಕ ಕಿಟ್ಟ್‌ಗಳ ವಿತರಣೆಗೆ ಕ್ರಮ ಆಗಿದೆ ಎಂದರು.

ಲಾಕ್‌ಡೌನ್ ಸಂದರ್ಭದಲ್ಲಿ ತಾಲೂಕಿನ ಒಂದಷ್ಟು ಜನ ಆಹಾರ ಸಾಮಾಗ್ರಿ ಕೊರತೆಯಿಂದ ಸಂಕಷ್ಟದಲ್ಲಿದ್ದಾರೆ ಎಂದು ಬಿಜೆಪಿಯ ಬೂತ್ ಸಮಿತಿ ಕಾರ್ಯಕರ್ತರು ಹೇಳಿದ ಸಂದರ್ಭ ನಮ್ಮಮಂಡಲದ ಅಧ್ಯಕ್ಷ ಜಯಂತ ಕೋಟ್ಯಾನ್ ಮತ್ತು ನಾವೆಲ್ಲಾ ಒಟ್ಟು ಸೇರಿ ಇದಕ್ಕೆ ಒಂದು ಯೋಚನೆ ಮಾಡಿದ ಸಂದರ್ಭದಲ್ಲಿ ತಾಲೂಕಿನ ಪ್ರತೀ ಬೂತ್‌ಗಳಿಗೂ ಕಿಟ್ಟ್ ಕೊಡುವ ಬಗ್ಗೆ ನಿಶ್ಚಯ ಮಾಡಿದೆವು.
ಇಡೀ ರಾಜ್ಯ ಮತ್ತು ದೇಶಕ್ಕೆ ಮಾರ್ಗದರ್ಶನ ಮಾಡುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಇದಕ್ಕೆ ಚಾಲನೆ ಮಾಡಲಾಯಿತು. ಎಲ್ಲದಕ್ಕೂ ಮಾರ್ಗದರ್ಶಕರಾಗಿರುವ ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ನಳಿನ್ ಕುಮಾರ್ ಕಟೀಲು ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಿತು.
ತಾಲೂಕಿನಲ್ಲಿ ಪ್ರತೀ ಬೂತ್ ಸಮಿತಿಗೆ 100 ಕಿಟ್ಟ್‌ಗಳಂತೆ ವ್ಯವಸ್ಥೆ ಮಾಡಿದ್ದು ಒಟ್ಟು 30 ಸಾವಿರ ಕಿಟ್ಟ್‌ಗಳನ್ನು ತಯಾರಿಸಿದ್ದೇವೆ. ಆಶಾ ಕಾರ್ಯಕರ್ತರಿಗೆ, ಜಿಲ್ಲೆಯ ಸಾಂಪ್ರದಾಯಿಕ ಕಲೆಯಾದ ದೈವನರ್ತನ ಬಂಧುಗಳಿಗೆ, ಗೃಹರಕ್ಷಕ ದಳದ ಸಿಬ್ಬಂದಿಗಳಿಗೆ, ಗ್ರಾಮಸಹಾಯಕರಿಗೆ ಕಿಟ್ಟ್‌ಗಳನ್ನು ನೀಡಲಿದ್ದೇವೆ. ತಾಲೂಕಿನಲ್ಲಿರುವ ಎಎನ್‌ಎಂ ಗಳಿಗೆ, ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ, ಪೊಲೀಸ್ ಇಲಾಖೆ ಇವರೆಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ.
ಈ ಯೋಜನೆ ಅನುಷ್ಠಾನದಲ್ಲಿ ಬಿಜೆಪಿ ಪಕ್ಷದ ಅಧ್ಯಕ್ಷರು ಸೇರಿದಂತೆ ಎಲ್ಲ ಪದಾಧಿಕಾರಿಗಳು, ಬಿಜೆಪಿಯ ಬೂತ್ ಸಮಿತಿ ಅಧ್ಯಕ್ಷರುಗಳು, ಮುಖ್ಯವಾಗಿ ಬರೋಡದ ಉದ್ಯಮಿ ಶಶಿಧರ ಶೆಟ್ಟಿ ಮೊದಲಾದ ದಾನಿಗಳ ನೆರವಿನಿಂದ, ಎಲ್ಲ ಬೂತ್‌ಮಟ್ಟದ ಕಾರ್ಯಕರ್ತರ ಶ್ರಮದಿಂದ ಇದನ್ನು ಯಶಸ್ವಿಯಾಗಿ ಮಾಡಲು ಸಾಧ್ಯವಾಯಿತು.

 

ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಉಡುಪಿ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಅವರು ಉಜಿರೆ ಕಿಟ್ಟ್ ವಿತರಣೆ ಸ್ಥಳಕ್ಕೆ ಆಗಮಿಸಿದರು. ಶಾಸಕ ಹರೀಶ್ ಪೂಂಜ, ಬಿಜೆಪಿ ಮಂಡಳದ ಅಧ್ಯಕ್ಷ ಜಯಂತ ಕೋಟ್ಯಾನ್, ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ ಇವರು ಸಚಿವರನ್ನು ಮಾಲಾರ್ಪಣೆ ಮಾಡಿ ಬರಮಾಡಿಕೊಂಡರು. ಶಾಸಕ ಹರೀಶ್ ಪೂಂಜ ಅವರು ಸಚಿವರಿಗೆ ಮಾಹಿತಿ ನೀಡಿ, ಈ ಕಿಟ್ಟ್‌ಗಳನ್ನು ಬೂತ್‌ಮಟ್ಟದಲ್ಲಿ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಇದರ ತಯಾರಿಯಲ್ಲಿ ಬದುಕು ಕಟ್ಟೋಣ ಬನ್ನಿ ತಂಡದ ಮೋಹನ್ ಕುಮಾರ್ ಮತ್ತು ರಾಜೇಶ್ ಪೈ ಅವರ ಕಾರ್ಯಕರ್ತರ ತಂಡ ತೊಡಗಿಸಿಕೊಂಡ ಬಗ್ಗೆ, ಆಯಾಯಾ ಬೂತ್‌ಗಳಿಂದ 241 ವಾಹನಗಳ ಮೂಲಕ ಬೂತ್‌ಗಳಿಗೆ ಕಳಿಸಿಕೊಟ್ಟ ವಿವರ ನೀಡಿದರು.


ಈ ಸಂದರ್ಭ ಪಕ್ಷದ ಪ್ರ. ಕಾರ್ಯದರ್ಶಿ ಸೀತಾರಾಮ ಬಿ.ಎಸ್, ಮುಂದಿನ ಕಾರ್ಯದರ್ಶಿಗಳಾದ ಶ್ರೀನಿವಾಸ ರಾವ್ ಧರ್ಮಸ್ಥಳ ಮತ್ತು ಸುಬ್ರಹ್ಮಣ್ಯ ಗೌಡ ಕೈಕುರೆ, ಸದಾನಂದ ಪೂಜಾರಿ ಉಂಗಿಲಬೈಲು, ಸುಧೀರ್ ಆರ್ ಸುವರ್ಣ, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಧರ ಎಂ ಕಲ್ಮಂಜ ಮೊದಲಾದವರು ಉಪಸ್ಥಿತರಿದ್ದರು.

ಬದುಕುಕಟ್ಟೋಣ ಬನ್ನಿ ತಂಡದಿಂದ ಶ್ರಮದಾನ:
ಲಕ್ಷ್ಮೀ ಗ್ರೂಪ್ಸ್ ಮಾಲಿಕ ಮೋಹನ್ ಕುಮಾರ್ ಉಜಿರೆ ಮತ್ತು ಸಂಧ್ಯಾ ಟ್ರೇಡರ್‍ಸ್ ಮಾಲಕ ರಾಜೇಶ್ ಪೈ ಅವರ ನೇತೃತ್ವದ ಬದುಕು ಕಟ್ಟೋಣ ಬನ್ನಿ ತಂಡದಿಂದ ಶ್ರೀ ಜನಾರ್ದನ ದೇವಸ್ಥಾನದ ನೂತನ ಸಭಾಂಗಣದಲ್ಲಿ ಕಿಟ್ಟ್‌ಗಳ ತಯಾರಿ ನಡೆದಿತ್ತು. ಶಿಸ್ತು ಬದ್ಧವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ನೂರರಷ್ಟು ಕಾರ್ಯಕರ್ತರು ಕೆಲಸ ಮಾಡಿದರು. ವಿರತಣೆಗೆ ಕ್ರಮ ಕೈಗೊಳ್ಳಲಾಗಿದ್ದ ಉಜಿರೆ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ೨೪೧ ಬೂತ್‌ಗಳಿಗೆ ಪ್ರತ್ಯೇಕ ವಾಹನ ಗೊತ್ತುಪಡಿಸಿ ಶಿಸ್ತುಬದ್ಧವಾಗಿಯೇ ಕಿಟ್ ತುಂಬುವ ಕಾರ್ಯ ಮಾಡಲಾಯಿತು. ಇಲ್ಲಿ ರವಿ ಚಕ್ಕಿತ್ತಾಯ, ತಿಮ್ಮಯ್ಯ ನಾಯ್ಕ, ಸೀತಾರಾಮ ಬಿ.ಎಸ್, ಶ್ರೀನಿವಾಸ ರಾವ್ ಧರ್ಮಸ್ಥಳ ಮೊದಲಾದವರು ಕಾರ್ಯವೆಸಗಿದರು. ರಕ್ಷಿತ್ ಶೆಟ್ಟಿ, ಸುಬ್ರಹ್ಮಣ್ಯ ಗೌಡ ಕೈಕುರೆ, ಹಾಗೂ ಇತರರು ಸಹಕಾರ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.