ತಾಲೂಕು ಆಸ್ಪತ್ರೆಯಲ್ಲಿ ಗಂಟಲು ದ್ರವ ಮಾದರಿ ಸಂಗ್ರಹಣಾ ಕೇಂದ್ರ ಆರಂಭ ಮಂಗಳೂರಿನ ನಿರ್ಮಿತಿ ಕೇಂದ್ರದ ಸಹಯೋಗ, ಶಾಸಕ ಹರೀಶ್ ಪೂಂಜರಿಂದ ಚಾಲನೆ

ಬೆಳ್ತಂಗಡಿ: ಕೊರೊನಾ (ಕೋವಿಡ್19)ವೈರಸ್ ಪತ್ತೆಗಾಗಿ ಗಂಟಲು ದ್ರವ ಮಾದರಿ (ಥ್ರೋಟ್ ಸ್ವ್ಯಾಬ್) ಸಂಗ್ರಹಣಾ ಕೇಂದ್ರವನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು.


ಬೆಳ್ತಂಗಡಿಯ ತಾಲೂಕು ಸಮುದಾಯ ಆರೋಗ್ಯ ಕೇಂದ್ರ (ಕೋವಿಡ್ ಆಸ್ಪತ್ರೆ)ದಲ್ಲಿ ಎ.22ರಂದು ಮಂಗಳೂರಿನ ನಿರ್ಮಿತಿ ಕೇಂದ್ರದ ಸಹಯೋಗದಲ್ಲಿ ಸುಮಾರು ರೂ.35 ಸಾವಿರ ವೆಚ್ಚದಲ್ಲಿ ಗಂಟಲು ದ್ರವ ಮಾದರಿ ಸಂಗ್ರಹಣೆ ಕೇಂದ್ರಕ್ಕೆ ಚಾಲನೆ ನೀಡಲಾಯಿತು. ಶಂಕಿತ ಕೋವಿಡ್-19 ರೋಗಿಗಳ ಗಂಟಲು ದ್ರವ ಮಾದರಿಯನ್ನು ಇನ್ನಷ್ಟು ಸುರಕ್ಷಿತವಾಗಿ ಸಂಗ್ರಹಿಸಲು ಇದು ಸಹಕಾರಿಯಾಗಲಿದೆ.

ಈ ಸಂಗ್ರಹಣಾ ಕೇಂದ್ರ ಆರಂಭದಿಂದ ತಾಲೂಕಿನ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗೆ ಹೆಚ್ಚು ಅನುಕೂಲವಾಗಿದೆ.

ಈ ಸಂದರ್ಭದಲ್ಲಿ ಮಂಗಳೂರು ನಿರ್ಮಿತಿ ಕೇಂದ್ರ ಇಂಜಿನಿಯರ್ ರಾಜೇಂದ್ರ ಕಲ್ಬಾಗಿ, ತಾಲೂಕು ಆರೋಗ್ಯಾಧಿಕಾರಿ ಡಾ.ಕಲಾಮಧು, ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ.ವಿದ್ಯಾವತಿ, ಡಾ. ಆದಂ, ಆಸ್ಪತ್ರೆ ಅಧೀಕ್ಷಕ ಲೋಕೇಶ್, ಲ್ಯಾಬ್ ಟೆಕ್ನಿಷಿಯನ್ ಕಿರಣ್ ಪಂಡಿತ್, ಫಾರ್ಮಸಿಸ್ಟ್ ಚಂದ್ರಶೇಖರ್ ಮುಂತಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.