ಸೌತಡ್ಕ ಶ್ರೀಮಹಾಗಣಪತಿ ಸೇವಾ ಟ್ರಸ್ಟ್ ನಿಂದ ಕೋವಿಡ್19 ಪರಿಹಾರ ನಿಧಿಗಳಿಗೆ 2ಲಕ್ಷ ರೂಪಾಯಿ ದೇಣಿಗೆ * ಶಾಸಕ ಹರೀಶ್ ಪೂಂಜಗೆ ಚೆಕ್ ಹಸ್ತಾಂತರಿಸಿದ ಟ್ರಸ್ಟ್ ಅಧ್ಯಕ್ಷ ಕೃಷ್ಣ ಭಟ್

ಕೊಕ್ಕಡ: ಕೋವಿಡ್-19ರ ಚಿಕಿತ್ಸಾ ವೆಚ್ಚಕ್ಕಾಗಿ ಆರಂಭಿಸಿರುವ ಪ್ರಧಾನ ಮಂತ್ರಿಯವರ ಪಿಎಂ ಕೇರ್ ನಿಧಿಗೆ ಹಾಗೂ ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ಸೌತಡ್ಕ ಶ್ರೀಮಹಾಗಣಪತಿ ಸೇವಾ ಟ್ರಸ್ಟ್ ನಿಂದ ತಲಾ 1 ಲಕ್ಷ ರೂಪಾಯಿಯ ಚೆಕ್‍ನ್ನು ಟ್ರಸ್ಟ್ ಅಧ್ಯಕ್ಷ ಕೆ.ಕೃಷ್ಣ ಭಟ್ ಅವರು ಶಾಸಕ ಹರೀಶ್ ಪೂಂಜ ಅವರ ಮೂಲಕ ಹಸ್ತಾಂತರಿಸಿದರು.

ಸಾಮಾಜಿಕ ಕಾರ್ಯಗಳ ಬಗ್ಗೆ ಕಳಕಳಿಯನ್ನು ಹೊಂದಿರುವ ಸೌತಡ್ಕ ಶ್ರೀಮಹಾಗಣಪತಿ ಸೇವಾ ಟ್ರಸ್ಟ್ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಕೋವಿಡ್19 ಪರಿಹಾರ ನಿಧಿಗೆ ಒಟ್ಟು 2 ಲಕ್ಷ ರೂಪಾಯಿ ನೀಡಿ ಜನರ ಸಂಕಷ್ಟಕ್ಕೆ ಸ್ಪಂದಿಸುವ ತೀರ್ಮಾನ ಕೈಗೊಂಡಿದೆ.
ಈ ಸಂದರ್ಭದಲ್ಲಿ ಶ್ರೀಮಹಾಗಣಪತಿ ಸೇವಾ ಟ್ರಸ್ಟ್ ನ ಟ್ರಸ್ಟಿಗಳಾದ ಪೂವಾಜೆ ಕುಶಾಲಪ್ಪ ಗೌಡ, ಸಂದೇಶ್ ಶಬರಾಯ ಗಾನಗಿರಿ, ದಾಮೋದರ ಶೆಟ್ಟಿ ನೂಜೆ ಹಾಗೂ ಎಂಡೋ ವಿರೋಧಿ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು, ತುಕ್ರಪ್ಪ ಶೆಟ್ಟಿ ನೂಜೆ, ಸೌತಡ್ಕ ದೇವಳದ ಲೆಕ್ಕ ಪರಿಶೋಧಕ ಶ್ರೀಕೃಷ್ಣ ಭಟ್ ಹಿತ್ತಿಲು, ಶಿವಸುಬ್ರಹ್ಮಣ್ಯ ಭಟ್ ಹಿತ್ತಿಲು, ಯೋಗಿಶ್ ಗೌಡ ಆಲಂಬಿಲ, ಪುರಂದರ ಗೌಡ ಕಡಿರ ಮುಂತಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.