ಕೊಕ್ರಾಡಿ ಗ್ರಾಮದ 224 ಬಡ ಕುಟುಂಬಗಳಿಗೆ ಅಗತ್ಯ ಸಾಮಾಗ್ರಿಯ ಆಹಾರ ಕಿಟ್‍ಗಳ ವಿತರಣೆ

ಕೊಕ್ರಾಡಿ: ಕೊರೊನಾ ವೈರಸ್ ಹರಡದಂತೆ ತಡೆಯಲು ಲಾಕ್‍ಡೌನ್ ಘೋಷಿಸಿದ್ದರಿಂದ ಅಗತ್ಯ ಸಾಮಾಗ್ರಿ ಖರೀದಿಸಲು ಸಂಕಷ್ಟಕ್ಕೆ ಒಳಗಾದ ಅಂಡಿಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಕ್ರಾಡಿ ಗ್ರಾಮದ 224 ಬಡ ಕುಟುಂಬಗಳಿಗೆ ರೂ.1.34 ಲಕ್ಷ ವೆಚ್ಚದ ಅಗತ್ಯ ಸಾಮಾಗ್ರಿಗಳ ಆಹಾರ ಕಿಟ್‍ನ್ನು (10 ಕೆ.ಜಿ ಅಕ್ಕಿ, ಸಕ್ಕರೆ, ಚಾ ಹುಡಿ, ಮೆಣಸು, ಉಪ್ಪು, ಈರುಳ್ಳಿ) ವಿತರಿಸಲಾಯಿತು.

ಆಹಾರ ಕಿಟ್ ವಿತರಿಸಲು ಸಹಕರಿಸಿದ ದಾನಿಗಳಾದ ಕ್ಷೇಮ ಕ್ಲಿನಿಕ್‍ನ ಡಾ.ವಿಷ್ಣು ಕುಮಾರ್ ಹೆಗ್ಡೆ, ಸೌದಿ ಅರೇಬಿಯಾ ಉದ್ಯಮಿ ಸುಧೀಶ್ಚಂದ್ರ ಹೆಗ್ಡೆ, ದ.ಕ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಕೊಕ್ರಾಡಿ ಗ್ರಾಮ ಪಂಚಾಯಿತಿ ಸದಸ್ಯ ಜಗದೀಶ್ ಹೆಗ್ಡೆ, ಚಂದ್ರಕಾಂತ್ ಉಮನಬೆಟ್ಟು ಕೊಕ್ರಾಡಿ , ಗೌತಮ ಕೊಕ್ರಾಡಿ , ಪ್ರಮೋದ್ ಆಚಾರ್ಯ ಕೊಕ್ರಾಡಿ , ಬಿಜೆಪಿ ಗ್ರಾಮ ಸಮಿತಿ ಕಾರ್ಯದರ್ಶಿ ಪ್ರೀತಮ್ ಕುಲಾಲ್ ಕೊಕ್ರಾಡಿ, ಕೊಕ್ರಾಡಿ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷರಾದ ಸುರೇಂದ್ರ ಕೋಟ್ಯಾನ್, ಪ್ರದೀಪ್ ಶೆಟ್ಟಿ, ಶ್ರೀದೇವಿ ಕೊಕ್ರಾಡಿ , ನವದುರ್ಗ ಜ್ಯುವೆಲ್ ಆಟ್ರ್ಸ್ ಕೊಕ್ರಾಡಿ ನೀಲಕಂಠ ಪ್ರಸಾದ್, ಲೋಕಯ್ಯ ಪೂಜಾರಿ ಕೊಕ್ರಾಡಿ, ಕೃಷ್ಣ ಕೊಕ್ರಾಡಿ, ಆಹಾರದ ಕಿಟ್‍ಗಳನ್ನು ವಿತರಿಸಲು ವಾಹನದ ವ್ಯವಸ್ಥೆ ಮಾಡಿದ ಬಿಜೆಪಿ ಕಾರ್ಯಕರ್ತ ಸುಜ್ಞಾನ್ ಜೈನ್ ಕೊಕ್ರಾಡಿ ಮತ್ತು ಬಿಜೆಪಿ ಕಾರ್ಯಕರ್ತರ ಸಹಕಾರದಿಂದ ಮನೆ ಮನೆಗೆ ತೆರಳಿ ವಿತರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.