ಊಟವಿಲ್ಲದೆ ಒದ್ದಾಡುತ್ತಿದ್ದ ಬಿಹಾರದ 24 ಮಂದಿ ವಲಸೆ ಕಾರ್ಮಿಕರಿಗೆ ಅಕ್ಕಿ ವಿತರಣೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ತಣ್ಣೀರುಪಂಥ ಗ್ರಾಮ ಪಂಚಾಯತ್‍ನ ಕರಾಯ ಪೇಟೆಯ ಪಕ್ಕದಲ್ಲಿ ಬಿಹಾರದಿಂದ ಬಂದಿರುವ ಸುಮಾರು 24 ವಲಸೆ ದಿನಗೂಲಿ ಕಾರ್ಮಿಕರು ಲಾಕ್ ಡೌನ್‍ನಿಂದಾಗಿ ಕೆಲಸವಿಲ್ಲದೆ ಅತ್ತ ಊರಿಗೆ ಹೋಗಲು ಸಾಧ್ಯವಾಗದೆ ಕಂಗಾಲಾಗಿದ್ದು, ಊಟವಿಲ್ಲದೆ ಒದ್ದಾಡುತ್ತಿರುವ ಮಾಹಿತಿಯನ್ನು ಪಡೆದ ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಯವರು 50 ಕೆಜಿ ಅಕ್ಕಿ, 5 ಕೆಜಿ ಅವಲಕ್ಕಿಯನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.


ಅದೇ ರೀತಿ ಗ್ರಾಮ ಪಂಚಾಯತ್ ವಿವಿಧ ದಾನಿಗಳಿಂದ ಸಂಗ್ರಹಿಸಿದ ಸುಮಾರು 170ಕೆಜಿ ಅಕ್ಕಿ, ಹಾಗೂ ಮೊಯಿದ್ದೀನ್ ಕರಾಯ ಇವರು ನೀಡಿದ ಅಕ್ಕಿಯಿಂದ ತಕ್ಕ ಮಟ್ಟಿಗೆ ಜೀವನ ಸಾಗಿಸುತಿದ್ದಾರೆ. ಆಹಾರ ಸಾಮಗ್ರಿಗಳನ್ನು ನೀಡಿದ ದಾನಿಗಳಿಗೆ ಗ್ರಾ.ಪಂ ಅಧ್ಯಕ್ಷ
ಜಯವಿಕ್ರಮ್ ಕಲ್ಲಾಪು ಕೃತಜ್ಞತೆ ಸಲ್ಲಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.