ಬೆಳ್ತಂಗಡಿಯ ಅಂಬ್ಯುಲೆನ್ಸ್ ಚಾಲಕರಿಗೆ ಮಾಸ್ಕ್ ಗಳ ವಿತರಣೆ

ಬೆಳ್ತಂಗಡಿ : ಮಹಾಮಾರಿ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಸ್ವಚ್ಛತೆ ಹಾಗೂ ಸುರಕ್ಷತೆಗಾಗಿ ಬೆಳ್ತಂಗಡಿ ಎಸ್‍ಡಿಎಂ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್, ಗೈಡ್ಸ್ ನ ಮುಖ್ಯ ಶಿಕ್ಷಕಿ ಪ್ರಮೀಳಾ ಹಾಗೂ ಸಹ ಶಿಕ್ಷಕರು ಮಿನಿ ವಿಧಾನಸೌಧದ ಮುಂಭಾಗದಲ್ಲಿ ಬೆಳ್ತಂಗಡಿಯ ಅಂಬ್ಯುಲೆನ್ಸ್ ಚಾಲಕರಿಗೆ ಮಾಸ್ಕ್ ಗಳನ್ನು ವಿತರಿಸಿದರು.

ಕೊರೊನಾ ಸೇನಾನಿಗಳಾದ ವೈದ್ಯರು, ವೈದ್ಯಕೀಯ ಸಿಬ್ಬಂದಿ ವರ್ಗ, ಪೊಲೀಸರು ಇವೆಲ್ಲದರ ಮದ್ಯೆ ಎಲೆಮರೆಯ ಕಾಯಿಯಂತೆ “ನೀವು ಮನೆಯಲ್ಲಿರಿ ನಾವು ನಿಮ್ಮ ಸೇವೆಯಲ್ಲಿ “ಎಂಬ ಧ್ಯೇಯ ವಾಕ್ಯದೊಂದಿಗೆ ದಿನದ 24 ಗಂಟೆಯೂ ಜನರ ಶ್ರೇಯಸ್ಸಿಗಾಗಿ, ನಿರಂತರವಾಗಿ ತುರ್ತು ಸೇವೆಯಲ್ಲಿ ತೊಡಗಿರುವ ಅವರನ್ನು ಅಭಿನಂದಿಸಿ ಅವರ ಸುರಕ್ಷತೆಗಾಗಿ ಮಾಸ್ಕ್‍ಗಳನ್ನು ಹಂಚಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.