ವಾರದ ಸಂತೆ ಸ್ಥಳಾಂತರಗೊಂಡಲ್ಲಿಗೆ ಎ.ಪಿ.ಎಂ.ಸಿ ಅಧ್ಯಕ್ಷ ಕೇಶವ ಗೌಡ ಭೇಟಿ

ಬೆಳ್ತಂಗಡಿ: ಬೆಳ್ತಂಗಡಿವಾರದ ಸಂತೆ ಎಪಿಎಂಸಿ ಗೆ ಸ್ಥಳಾಂತರಗೊಂಡಲ್ಲಿ ಗ್ರಾಹಕರಿಗೆ ಉತ್ತಮ ಮತ್ತು ವಿಶಾಲ ಅವಕಾಶ ಲಭಿಸಲಿದೆ ಮತ್ತು ಸರಕಾರ ಅದೆಷ್ಟೋ ಕೋಟಿ ರೂ. ಖರ್ಚು ಮಾಡಿ ರೂಪಿಸಿದ ವ್ಯವಸ್ಥೆಯ ಸದ್ಬಳಕೆಯಾಗಲಿದೆ ಎಂದು ಈ ಮೊದಲಿನಿಂದಲೇ ಪ್ರಯತ್ನಿಸುತ್ತಿದ್ದ ಎಪಿಎಂಸಿ ಅಧ್ಯಕ್ಷ ಕೇಶವ ಪಿ ಗೌಡ ಅವರು, ಇಂದು ತಾತ್ಕಾಲಿಕ ನೆಲೆಯಲ್ಲಿ ಸ್ಥಳಾಂತರಗೊಂಡ ಸಂತೆ ವ್ಯವಸ್ಥೆಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ವರ್ತಕರ ಜೊತೆ ಮಾಡಿನಾಡಿದ ಅವರು ಅವರಿಗೆ ಬೇಕಾದ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ನಾವು ಸಿದ್ದ ಎಂದು ಭರವಸೆ ನೀಡಿದರು. ಜೊತೆಗೆ ಗ್ರಾಹಕರ ಜೊತೆಯೂ ಮಾತನಾಡಿ, ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯವಹಾರದಲ್ಲಿ ತೊಡಗಿಸಿಕೊಳ್ಳುವಂತೆ ಭಿನ್ನವಿಸಿಕೊಂಡರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.