ಅವಿನ್ ಆಕಾಶ್ ಫ್ರಾಂಕೋ ಗೆ ಕೊರೊನಾ ನೆಗೆಟಿವ್:: ಕುಟುಂಬದ ಕೈ ಸೇರಿದ ವೈದ್ಯಕೀಯ ಪರೀಕ್ಷೆ ವರದಿ

 

ಬೆಳ್ತಂಗಡಿ; ನಿನ್ನ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದ, ಅಲ್ಫೋನ್ಸ್ ಫ್ರಾಂಕೋ ಅವರ ಪುತ್ರ, ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರು ಉಪನ್ಯಾಸಕರ ಅವಿನ್ ಆಕಾಶ್ ಫ್ರಾಂಕೋ(26ವ.) ಅವರಿಗೆ ಕೊರೊನಾ ಶಂಕೆ ಇತ್ತೇ ಎಂಬ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು ಅದರಲ್ಲಿ ನೆಗೆಟಿವ್ ವರದಿ ಇಂದು ಕುಟುಂಬದ ಕೈ ಸೇರಿದೆ.

ಅವರಿಗೆ ಜ್ವರ ಕೂಡ ಇದ್ದುದರಿಂದ ಸಹಜವಾಗಿಯೇ ವೈದ್ಯಾಧಿಕಾರಿಗಳು ಮತ್ತು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮದ ಭಾಗವಾಗಿ ಕೊರೊನಾ ಪರೀಕ್ಷೆ ಕೈ ಗೊಂಡಿದ್ದರು.

ಇದರ ವರದಿಗಾಗಿ ಎಂಟು ಗಂಟೆ ಕಾಯಬೇಕಾಗಿ ಬಂದಿದ್ದರಿಂದ ಮೃತದೇಹವನ್ನು ಕೆ.ಎಮ್.ಸಿ ಆಸ್ಪತ್ರೆಯಲ್ಲಿ ಇಡಲಾಗಿತ್ತು.

ಇದೀಗ ನೆಗೆಟಿವ್ ರಿಪೋರ್ಟ್ ಬಂದಿರುವುದರಿಂದ ಕುಟುಂಬದ ದವರಿಗೆ ಪಾರ್ಥಿವ ಶರೀರ ಹಸ್ತಾಂತರ ಪ್ರಕ್ರೀಯೆ ಇದೀಗ ನಡೆಯಲಿದೆ.

ನಿನ್ನೆಯೇ
ಪ್ರಕಟಿಸಿದಂತೆ ರವಿವಾರ ಬೆಳಿಗ್ಗೆ 11.00 ಕ್ಕೆ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ವಠಾರದಲ್ಲಿ ಅಂತ್ಯಸಂಸ್ಕಾರ ಕ್ರಿಯೆ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.