ಅವಿನ್ ಆಕಾಶ್ ಫ್ರಾಂಕೋ ಅಂತ್ಯ ಸಂಸ್ಕಾರ ನಾಳೆ ಬೆಳಿಗ್ಗೆ 11.00 ಕ್ಕೆ

Advt_NewsUnder_1
Advt_NewsUnder_1
Advt_NewsUnder_1

ಮದ್ದಡ್ಕ; ಬೆಳ್ತಂಗಡಿ ಯ ಹಿರಿಯ ಇಲೆಕ್ಟ್ರಾನಿಕ್ ಉದ್ಯಮಿ, ಸೋಜಾ ಇಲೆಕ್ಟ್ರಾನಿಕ್ ಮಾಲಕ, SDPI ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೋ ಅವರ ಏಕೈಕ ಪುತ್ರ, ಇಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದ ಅವಿನ್ ಆಕಾಶ್ ಫ್ರಾಂಕೋ ಅವರ ಅಂತ್ಯ ಸಂಸ್ಕಾರ ನಾಳೆ(ರವಿವಾರ) ಬೆಳಿಗ್ಗೆ 11.00 ಕ್ಕೆ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ವಠಾರದಲ್ಲಿ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಉಪನ್ಯಾಸಕರಾಗಿದ್ದ ಅವಿನ್ ಆಕಾಶ್ ಫ್ರಾಂಕೋ ಅವರಿಗೆ ಗುರುವಾರ ಎದೆ ನೋವು ಕಾಣಿಸಿಕೊಂಡಿತ್ತು. ಲಾಯುಲದ ಖಾಸಗಿ ಆಸ್ಪತ್ರೆಯಲ್ಲಿ ಅವರು ಪರೀಕ್ಷೆ ನಡೆಸಿ‌ಮನೆಗೆ ತೆರಳಿದ್ದರು. ಇಂದು ಬೆಳಿಗ್ಗೆ ಮತ್ತೆ‌ ಎದೆ ನೋವು ಕಾಣಿಸಿಕೊಂಡಾಗ ಮತ್ತೆ ಲಾಯಿಲ ಖಾಸಗಿ ಆಸ್ಪತ್ರೆಗೆ ಬಂದು ಇಸಿಜಿ ಪರೀಕ್ಷೆ ನಡೆಸಿದ್ದರು.
ವೈದ್ಯರ ಸಲಹೆ ಮೇರೆಗೆ ಮಂಗಳೂರಿನ‌ ಖಾಸಗಿ ಆಸ್ಪತ್ರೆಗೆ ಹೋಗಿದ್ದರು.
ಆದರೆ ಅಲ್ಲಿ ಅವರು ಹೃದಯಾಘಾತದಿಂದ ನಿಧನಹೊಂದಿದ್ದರು.

ಕೊರೊನಾ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಪೂರ್ವ ಜಾಗೃತಿಗಾಗಿ ಎಲ್ಲ‌ ಮೃತದೇಹಗಳ ವಿಶೇಷ ಪರೀಕ್ಷೆ
ಕೋವಿಡ್ ಪರೀಕ್ಷೆ ನಡೆಸಿದ ಬಳಿಕವೇ ಕುಟುಂಬಸ್ತರಿಗೆ ಬಿಟ್ಟುಕೊಡುವ ವ್ಯವಸ್ಥೆ ಸದ್ಯಕ್ಕೆ ಜಿಲ್ಲಾಡಳಿತ ಮತ್ತು ವೈದ್ಯಕೀಯ ವಿಭಾಗ ಕ್ರಮ‌ಕೈಗೊಂಡಿದ್ದು ಅಂತೆಯೇ ಕ್ರಮ‌ ಜರುಗಿಸಿದೆ.
ಲಾಕ್ ಡೌನ್ ನಿಯಮಗಳಿಗೆ ಗೌರವ ನೀಡಿ ನಾಳೆ‌ ಬೆಳಿಗ್ಗೆ 11.00 ಗಂಟೆಗೆ ಕುಟುಂಬದ ಆಪ್ತರು, ಧರ್ಮಗುರುಗಳ ಉಪಸ್ಥಿತಿಯಲ್ಲಿ ಅಂತಿಮ‌ ವಿಧಿವಿಧಾನಗಳು ನಡೆದು ಸಂಸ್ಕಾರ ಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.