ಗೇರುಕಟ್ಟೆ “ಬಡವರ ಬಂಧು” ವಾಟ್ಸಪ್ ಗ್ರೂಪ್‌ 210 ಕುಟುಂಬಕ್ಕೆ ಆಹಾರ ದಿನಸಿ ಕಿಟ್ ವಿತರಣೆ

ಗೇರುಕಟ್ಟೆ : ಇಲ್ಲಿಯ ಕಳಿಯ ಪಂಚಾಯತು ವ್ಯಾಪ್ತಿಯ ಬಡ ಕುಟುಂಬಗಳಿಗೆ ಸುಮಾರು 2 ಲಕ್ಷಕ್ಕೂ ಹೆಚ್ಚಿನ ಮೊತ್ತದ 220 ಆಹಾರ ದಿನಸಿ ಕಿಟ್ ಗಳನ್ನು ಎ.13 ರಿಂದ ಎ.18 ರ ತನಕ ವಿತರಣೆ ಮಾಡಿದರು.

ನಮಗೆಲ್ಲರಿಗೂ ಊಹಿಸಲು ಅಸಾಧ್ಯವಾದ ಭೀಕರ ಕಾಯಿಲೆ ಕೊರೊನ ಕೋವಿಡ್ -19ಎನ್ನುವ ಮಹಾ ಮಾರಿ ದೇಶದಲ್ಲಿ ಭೀಕರ ಅವಾಂತರ ಸೃಷ್ಟಿಯಾಗಿದೆ.ಬಡ ಕೂಲಿ ಕಾರ್ಮಿಕರಿಗೆ ಉದ್ಯೋಗ ಇಲ್ಲದೆ ಅನಾಥರು,ನಿರ್ಗತಿಕರು ಒಂದು ಹೊತ್ತಿನ ಊಟಕ್ಕಾಗಿ ಪರದಾಡುವ ಪರಿಸ್ಥಿತಿ ಬಂದಿದೆ. ಅದಕ್ಕಾಗಿ ಗೇರುಕಟ್ಟೆ ಕಳಿಯ ಪಂಚಾಯತು ವ್ಯಾಪ್ತಿಯ ಹತ್ತಾರು ಯುವಕರು ಒಟ್ಟು ಸೇರಿ “ಬಡವರ ಬಂಧು “ಹೆಸರಿನ ವಾಟ್ಸಪ್ ಗ್ರೂಪ್ ರಚನೆ ಮಾಡಿದರು.

ಈ ಸಂದರ್ಭದಲ್ಲಿ ಕೆಲವೊಂದು ಸಂಘಸಂಸ್ಥೆಗಳ ಪದಾಧಿಕಾರಿಗಳು, ಉದ್ಯಮಿಗಳು,ಸರಕಾರಿ ನೌಕರರು, ಊರ- ಪರ-ಊರಿನ ಉದ್ಯೋಗಸ್ಥರು,ಸ್ಥಳೀಯ ಕೃಷಿಕರು, ಗ್ರಾಮಸ್ಥರು ಧನಸಹಾಯ ನೀಡುವ ಮೂಲಕ ಗ್ರಾಮದ ಅಸಹಾಯಕರಿಗೆ ಸಹಾಯ ಹಸ್ತ ನೀಡಿದರು.ಹಾಗೂ “ಬಡವರ ಬಂಧು” ವಾಟ್ಸಪ್ ಗ್ರೂಪ್‌ ಯುವಕರ ಕೆಲಸ ನಿಜಕ್ಕೂ ಅಭಿನಂದನೀಯ ಎಂದು ಗ್ರಾಮಸ್ಥರುಕೊಂಡಾಡಿದ್ದಾರೆ.ಹಾಗೂ ಹೆಚ್ಚಿನ ದಾನಿಗಳು ಸಹಕರಿಸಿದ್ದಾರೆ. ಸುದ್ದಿ ಪತ್ರಿಕೆ ಬಡವರ ಬಂಧು ವಾಟ್ಸಪ್ ಗ್ರೂಪ್‌ ನವರ ಸಹಾಯ ಪಡೆದ ಫಲಾನುಭವಿಗಳನ್ನು ವಿಚಾರಿಸಿದ ‌ವರದಿಯಾಗಿರುತ್ತದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.