ಸರಕಾರದ ನಿಯಮ ಪಾಲಿಸದವರ ವಿರುದ್ಧ ಪೊಲೀಸರಿಂದ ಕಠಿಣ ಕ್ರಮ

  • ಅಲ್ಲಲ್ಲಿ ಕಾರ್ಯಾಚರಣೆ, ತಪಾಸಣೆ : ಅನಗತ್ಯ ತಿರುಗಾಡುವ ವಾಹನಗಳ ಮೇಲೆ ಕೇಸ್

ಬೆಳ್ತಂಗಡಿ: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ವಾಹನಗಳಲ್ಲಿ ನಿಯಮ ಪಾಲನೆ ಮಾಡದೆ ಅನಗತ್ಯವಾಗಿ ಓಡಾಡುವವರ ಮೇಲೆ ಎ.17ರಂದು ಬೆಳ್ತಂಗಡಿ ಪೊಲೀಸರು ವಾಹನವನ್ನು ತಡೆದು ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ.

ದ್ವಿಚಕ್ರ ವಾಹನದಲ್ಲಿ ಒಬ್ಬರು, ಕಾರಿನಲ್ಲಿ ಹಿಂದಿನ ಸೀಟಿನಲ್ಲಿ ಒಬ್ಬರು, ರಿಕ್ಷಾದಲ್ಲಿ ಒಬ್ಬರು ಪ್ರಯಾಣಿಕರು ಮಾತ್ರ ಅಗತ್ಯ ಸಾಮಾಗ್ರಿ ಖರೀದಿಗೆ ಪೇಟೆಗೆ ಬರಬೇಕು ಎಂಬ ಸರಕಾರದ ಆದೇಶದ ಹಿನ್ನೆಲೆಯಲ್ಲಿ ಬೆಳ್ತಂಗಡಿ, ಗುರುವಾಯನಕೆರೆ, ಕುವೆಟ್ಟು, ಉಜಿರೆ ಸೇರಿದಂತೆ ವಿವಿಧ ಮುಖ್ಯ ಪೇಟೆಗಳಲ್ಲಿ ಪೊಲೀಸರು ಬೆಳಗ್ಗಿಂದಲೇ ವಾಹನವನ್ನು ತಪಾಸಣೆ ನಡೆಸಿ, ವಿಚಾರಿಸಿ ಅಗತ್ಯ ಕೆಲಸಗಳಿಗೆ ಹೋಗುವವರನ್ನು, ಪಾಸ್ ಇದ್ದವರನ್ನು ಬಿಟ್ಟು, ಅನಗತ್ಯವಾಗಿ ಪೇಟೆಗೆ ಬರುವ ವಾಹನವನ್ನು ತಡೆ ಹಿಡಿದು ಕೇಸು ಹಾಕಿ ಹಾಕಿದ್ದಾರೆ.

ಬೆಳ್ತಂಗಡಿ ಠಾಣೆಯ ಎಸ್.ಐ ನಂದಕುಮಾರ್ ಅವರ ನೇತೃತ್ವದಲ್ಲಿ ಪೊಲೀಸರು ಸಂತೆಕಟ್ಟೆ ಸಮೀಪ ಆನೇಕ ಅನಗತ್ಯವಾಗಿ ತಿರುಗಾಡುತ್ತಿದ್ದ ವಾಹನಗಳನ್ನು ಮುಟ್ಟುಗೋಲು ಹಾಕಿದ್ದಾರೆ. ಅಲ್ಲದೆ ಅಗತ್ಯ ಸಾಮಾಗ್ರಿಗಳ ಖರೀದಿ, ಆಸ್ಪತ್ರೆ, ಮೆಡಿಕಲ್, ಉದ್ಯೋಗಕ್ಕೆ ಹೋಗುವವರಿಗೆ ಸೂಚನೆ ನೀಡಿ ಬಿಟ್ಟಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.