ಆಹಾರ ಸಾಮಾಗ್ರಿ ಕಿಟ್‍ಗಳ ನಿರಾಕರಿಸಿ ತಣ್ಣೀರುಪಂಥ ಗ್ರಾ.ಪಂ.ಗೆ ರೂ. 2500 ನೀಡಿದ ಕುಟುಂಬ!

Advt_NewsUnder_1
Advt_NewsUnder_1
Advt_NewsUnder_1

ತಣ್ಣೀರುಪಂತ : ಕೊರೊನಾ ವೈರಸ್ ಹರಡದಂತೆ ತಡೆಯಲು ಲಾಕ್‍ಡೌನ್ ಘೋಷಿಸಿರುವುದರಿಂದ ಬಡ ಕುಟುಂಬಗಳಿಗೆ ಅಗತ್ಯ ಆಹಾರ ಸಾಮಾಗ್ರಿ ಕಿಟ್ ವಿತರಿಸಲಾಗುತ್ತಿದೆ. ಈ ಆಹಾರ ಸಾಮಾಗ್ರಿ ಕಿಟ್‍ನ್ನು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಚೀಂಕ್ರ ಅವರ ಸಹೋದರಿ ಅಕ್ಕಮ್ಮ ಕುಟುಂಬ ನಿರಾಕರಿಸಿದೆ.

ಅಕ್ಕಮ್ಮ ಮತ್ತು ಮಕ್ಕಳಾದ ಉಷಾ, ಉಮಾ, ಮೋಹನ್ ಅವರ ಕುಟುಂಬಕ್ಕೆ ನೀಡಲು ಬಂದಿದ್ದ ಆಹಾರ ಸಾಮಾಗ್ರಿ ಕಿಟ್‍ನ್ನು ನಿರಾಕರಿಸಿ ಕಿಟ್ ನೀಡಲು ಬಂದವರ ಮುಖಾಂತರ ತಣ್ಣೀರುಪಂಥ ಗ್ರಾಮ ಪಂಚಾಯತ್‍ನ ಸಹಾಯನಿಧಿಗೆ ರೂ. 2500 ನೀಡಿ ಬಡವರಿಗೆ ಆಹಾರ ಸಾಮಾಗ್ರಿ ನೀಡುವಂತೆ ಮನವಿ ಮಾಡಿ ಮಾನವೀಯತೆಗೆ ಮಾದರಿಯಾಗಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಅಯೂಬ್, ನವೀನ್ ಕುಮಾರ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.