ಕೆಂಕನಾಜೆಯಲ್ಲಿ ಡಾ. ಬಿ ಆರ್ ಅಂಬೇಡ್ಕರ್ ರವರ 129ನೇ ಜನ್ಮದಿನಾಚರಣೆ

ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ರವರ 129ನೇ ಜನ್ಮದಿನಾಚರಣೆಯನ್ನು 14 ದೀಪಗಳನ್ನು ಹಚ್ವುಪುದರ ಮೂಲಕ ನೆರವಾರಿಸಲಾಯಿತು

ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಕೆಂಕನಾಜೆ ಅಮ್ಮು ಮೊಗೇರ ಇವರ ಮನೆಯಲ್ಲಿ ಜಿಲ್ಲಾ ಮುಖಂಡರಾದ ರಾಜು ಹೊಸಮಠ ಇವರ ನೇತೃತ್ವದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಧರ್ಮಸ್ಥಳ ಗ್ರಾಮಾಂತರ ಪೊಲೀಸ್ ಠಾಣೆ ಇದರ ಉಪ ನಿರೀಕ್ಷಕರಾದ ಓಡಿಯಪ್ಪ ಗೌಡ ಇವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ದೀಪಬೆಳಗಿಸಿ ಬಾಬಾಸಾಹೇಬರ ತತ್ವ ಸಿದ್ಧಾಂತ ಕಾನೂನಾತ್ಮಕ ಹೋರಾಟದ ಬಗ್ಗೆ ಮಾಹಿತಿ ನೀಡಿದರು ಈ ಸಂದರ್ಭದಲ್ಲಿ ಧರ್ಮಸ್ಥಳ ಠಾಣಾ ಫ್ರೋಫೆಸನರಿ ಎಸ್ ಐ ಕೃಷ್ಣ ಪೊಲೀಸ್ ಕಾನ್ ಸ್ಟೇಬಲ್ ರವೀಂದ್ರ ಸುಧಾಕರ್. ಹಾಗೂ ಮೊಗೇರ ಸಮೃದ್ಧಿ ಸೇವಾ ಸಂಘ ದ.ಕ ಇದರ ಅಧ್ಯಕ್ಷರಾದ ಸದಾಶಿವ ನಿಡ್ಲೆ ಮಂಜುನಾಥ್ ಮುಂಡ್ರುಪಾಡಿ ಹಾಗೂ ಅಮ್ಮುರವರ ಮನೆಯವರು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು. ಈ ವೇಳೆ ಅತಿಥಿಗಳನ್ನು ಸ್ವಾಗತಿಸಿ ಧನ್ಯವಾದ ರಾಜು ಹೊಸಮಠರವರು ಗೈದರು ನಂತರ ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.