ರೈತರ ಪಾಲಿಗೆ ಶುಭ ಸುದ್ದಿ; ಜೂನ್ 1 ಕ್ಕೆ ಮಳೆ ಆರಂಭ

Advt_NewsUnder_1
Advt_NewsUnder_1
Advt_NewsUnder_1

ಈ ವರ್ಷ ವಾಡಿಕೆಯಂತೆ ಜೂನ್ 1 ರಿಂದಲೇ ಮಳೆಗಾಲ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೊರೊನಾ ಕಾಟದ ನಡುವೆ ರೈತರಿಗೆ ಇದು ಸಿಹಿ ಸುದ್ದಿಯಾಗಿದೆ.

ನೈರುತ್ಯ ಮುಂಗಾರು 2020 ಜೂನ್‌ನಿಂದ ಸೆಪ್ಟಂಬರ್‌ವರೆಗೆ ಇರಲಿದ್ದು ದೀರ್ಘಕಾಲದ ಮುಂಗಾರು ಸರಾಸರಿ ಶೇ. 100 ರಷ್ಟು ಬರುವ ಸಾಧ್ಯತೆ ಇದೆ. ಇದರಲ್ಲಿ ಶೇ. 5 ರಷ್ಟು ಹೆಚ್ಚು ಅಥವಾ ಕಮ್ಮಿಯಾಗಲೂ ಬಹುದು ಎಂದು ಇಲಾಖೆ ಹೇಳಿದೆ.

ಕೃಷಿ ಆಧಾರಿತ ಭಾರತದಲ್ಲಿ ಆರ್ಥಿಕ ವ್ಯವಸ್ಥೆಗೆ ಮುಂಗಾರು ನಿರ್ಣಾಯಕ. ಕೊರೊನಾ ಲಾಕ್‌ಡೌನ್ ನಡುವೆ ಆರ್ಥಿಕ ಸ್ಥಿತಿ ನೆಲಕಚ್ಚಿಹೋಗಿದೆ. ಇದರಿಂದ ಮುಂಗಾರು ಮಳೆ ಬಹಳಷ್ಟು ಅಗತ್ಯವಾಗಿದೆ. ಆನಿಟ್ಟಿನಲ್ಲಿ ಹವಾಮಾನ ಇಲಾಖೆ ನೀಡಿರುವ ಸುದ್ಧಿ ಆಶಾದಾಯಕವಾಗಿದೆ.

ಕೇರಳಕ್ಕೆ ಮಳೆ ಬಂದರೆ ಕರ್ನಾಟಕಕ್ಕೆ ಆಗಮನ:
ಜೂನ್ 1 ರಂದು ಕೇರಳದ ರಾಜಧಾನಿ ತಿರುವನಂತಪುರಂಗೆ ನೈರುತ್ಯ ಮುಂಗಾರು ಪ್ರವೇಶಿಸಲಿದೆ. ಹೆಚ್ಚಾಗಿ ಕೇರಳಕ್ಕೆ ಮುಂಗಾರು ಪ್ರವೇಶಿಸಿದರೆ ಒಂದೆರಡು ದಿನಗಳಲ್ಲಿ ಕರ್ನಾಟಕಕ್ಕೂ ಕಾಲಿಡುತ್ತದೆ. ಆದರೆ ಈ ಬಾರಿ ಮುಂಗಾರು ಪ್ರಭಲವಾಗಿದ್ದರೆ ಅದೇ ದಿನ ಕರ್ನಾಟಕಕ್ಕೂ ಪ್ರವೇಶಿಸಲಿದೆ.

ದುರ್ಬಲವಾಗಿದ್ದರೆ 2-3 ದಿನಗಳ ಅಂತರದಲ್ಲಿ ಕರ್ನಾಟಕಕ್ಕೆ ಮಳೆ ಬರುವುದು ಖಚಿತ. ಒಟ್ಟು ಸರಾಸರಿಯಂತೆ ಈ ಬಾಗಿ ಮಳೆಯ ಪ್ರಮಾಣದಲ್ಲಿ ಕಡಿಮೆಯಾಗದು ಎಂಬುದು ಹವಾಮಾನ ಇಲಾಖೆ ತಜ್ಞರ ಅಭಿಮತ. ಈ ಬಗ್ಗೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ. ಜಿ.ಎಸ್ ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.