ರಕ್ತೇಶ್ವರಿಪದವು ಸಾರ್ವಜನಿಕ ಕುಡಿಯುವ ನೀರಿಗೆ ಚಾಲನೆ

ನ್ಯಾಯತರ್ಪು : ಇಲ್ಲಿಯ ಕಳಿಯ ಗ್ರಾಮ ಪಂಚಾಯತು ವ್ಯಾಪ್ತಿಯ ರಕ್ತೇಶ್ವರಿ ಪದವು ಎಂಬಲ್ಲಿರುವ ಸುಮಾರು 50 ಬಡ ಕುಟುಂಬದ ಫಲಾನುಭವಿಗಳಿಗೆ ಶುದ್ಧ ಕುಡಿಯುವ ನೀರಿನ ಸಂಪರ್ಕವನ್ನು ಪಂಚಾಯತು ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಎ.13 ರಂದು ಚಾಲನೆ ನೀಡಿ ಮಾತನಾಡುತ್ತಾ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತು 2019-20 ನೇ ಸಾಲಿನ ಎನ್.ಆರ್.ಡಬ್ಲ್ಯು.ಪಿ. ಅನುದಾನಲ್ಲಿ ಸುಮಾರು 5 ಲಕ್ಷ ಮೊತ್ತ ಬಿಡುಗಡೆಯಾಗಿದೆ.ಕಳಿಯ ಪಂಚಾಯತು 45 ಸಾವಿರ ಅನುದಾನ ಬಿಡುಗಡೆ ಮಾಡುವ ಮೂಲಕ ಪ್ರತಿಯೊಂದು ಮನೆಗೆ ಶೀಘ್ರದಲ್ಲೇ ನಳ್ಳಿ ನೀರು ಸರಬರಾಜು ಮಾಡುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಕಳಿಯ ಪಂಚಾಯತು ಸದಸ್ಯರಾದ ಸುಧಾಕರ ಮಜಲು,ವಿಶ್ವನಾಥ ಪೂಜಾರಿ ಮುರತ್ತಮೇಲು ಮತ್ತು ಮೋಹಿನಿ ಬಿ ಗೌಡ ಹಾಕೋಟೆ,ಪಂಚಾಯತು ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ್ ಕಾರ್ಯದರ್ಶಿ ಕುಂಞ್ಞ, ಪಂಚಾಯತು ಸಿಬ್ಬಂದಿ ಹಾಗೂ ಊರಿನ ಪ್ರಮುಖರು,ಗ್ರಾಮಸ್ಥರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.