3.50 ಲಕ್ಷ ರೂ. ವೆಚ್ಚದಲ್ಲಿ ಜಮಾಅತರಿಗೆ ಆಹಾರ ವಸ್ತುಗಳ ಕಿಟ್ಟ್ ವಿತರಿಸಿದ ಉಜಿರೆ ಮಸ್ಜಿದ್ ಅಧ್ಯಕ್ಷ ಹಾಜಿ ಬಿ.ಎಮ್ ಹಮೀದ್

ಉಜಿರೆ: ಕೊರೊನಾ ವೈರಸ್‌ನಿಂದಾಗಿ ಲಾಕ್‌ಡೌನ್ ಎದುರಿಸುತ್ತಿರುವ ಸಂದರ್ಭ ತಾನು ಅಧ್ಯಕ್ಷನಾಗಿರುವ ಉಜಿರೆ ಜಮಾಅತ್ ವ್ಯಾಪ್ತಿಯಲ್ಲಿ ಅರ್ಹರಿಗೆ ನೆರವಾಗಬೇಕೆಂಬ ಉದ್ದೇಶದಿಂದ ಮಸ್ಜಿದ್ ಆಡಳಿತ ಮಂಡಳಿ ಅಧ್ಯಕ್ಷರೂ ಆಗಿರುವ ಹಾಜಿ ಬಿ.ಎಮ್ ಅಬ್ದುಲ್ ಹಮೀದ್ ಅವರು  3.50 ಲಕ್ಷ ರೂ. ವೆಚ್ಚದ ಕಿಟ್ಟ್‌ಗಳನ್ನು ಹಸ್ತಾಂತರಿಸಿ ಸಾಮಾಜಿಕ ಜವಾಬ್ಧಾರಿಯೊಂದಿಗೆ ಮಾದರಿ ಮೆರೆದಿದ್ದಾರೆ.

ಈ ಪೈಕಿ ಸುಮಾರು 3.೦೦ ಲಕ್ಷ ರೂ.ಗಳ ಆಹಾರದ ಕಿಟ್ಟ್, ಧರ್ಮಗುರುಗಳಿಗೆ ತಲಾ 3 ಸಾವಿರದಂತೆ ಮತ್ತು ಇತರರಿಗೆ ಒಟ್ಟು 50 ಸಾವಿರ ರೂ.ಗಳ ನೆರವಿನೊಂದಿಗೆ ಒಟ್ಟು 3.50 ಲಕ್ಷ ರೂ. ಅವರು ವ್ಯಯಿಸಿದ್ದಾರೆ.
ಉಜಿರೆ ಜಮಾಅತಿನಲ್ಲಿ ಹೆಚ್ಚಿನ ಕುಟುಂಬಗಳು ದಿನಕೂಲಿ ಕಾರ್ಮಿಕರು, ರಿಕ್ಷಾ ಡ್ರೈವರ್‌ಗಳು, ಪೈಂಟರ್‌ಗಳು, ಇದ್ದು ಅವರ ಆರ್ಥಿಕ ಸಂಕಷ್ಟ, ಜೊತೆಗೆ ಏ. 24 ರಿಂದ ಉಪವಾಸ ಮಾಸ ಆರಂಭವೂ ಆಗಲಿರುವುದರಿಂದ ಎಲ್ಲ ವಿಚಾರಗಳನ್ನು ಮನಗಂಡು ಈ ಕಿಟ್ಟ್ ಕಾರ್ಯಕ್ರಮವನ್ನು ಅವರು ವೈಯುಕ್ತಿಕ ನೆಲೆಯಲ್ಲಿ ಹಮ್ಮಿಕೊಂಡಿದ್ದರು. ಮುದಕ್ಕೆ ಸಮಸ್ಯೆ ಎದುರಾದರೆ ಅಂತವರಿಗೆ ಜಮಾಅತ್‌ನ ಅಲ್‌ಅಮೀನ್ ಅಸೋಸಿಯೇಶನ್ ದಮ್ಮಾಮ್ ಘಟಕದ ಅಧ್ಯಕ್ಷರು ಎಲ್ಲ ರೀತಿಯ ಭರವಸೆ ನೀಡಿದ್ದಾರೆ.

ಬಿ.ಎಮ್ ಹಮೀದ್ ಅವರು ಉದ್ಯಮಿ ಹಾಗೂ ಕೃಷಿಕರೂ ಆಗಿದ್ದು, ಬೆಳ್ತಂಗಡಿ ತಾಲೂಕು ಮುಸ್ಲಿಂ ಒಕ್ಕೂಟ, ಪ್ರಿಯದರ್ಶಿನಿ ಸಹಕಾರಿ ಸಂಘದ ನಿರ್ದೇಶಕರಾಗಿ, ದ.ಕ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರೂ ಆಗಿದ್ದು ಹೆಸರುವಾಸಿಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.