ಅಳದಂಗಡಿ ಗ್ರಾ.ಪಂ.: ಜನಸ್ನೇಹಿ ಪೊಲೀಸ್ ವಾಟ್ಸ್ಯಾಪ್ ಗ್ರೂಪ್ ಮತ್ತು ಹಿಂದೂ ಯುವಶಕ್ತಿ ಆಲಡ್ಕ ಇವರಿಂದ ಸ್ಯಾನಿಟೈಸರ್ ಸಿಂಪಡಣೆ

ಅಳದಂಗಡಿ: ಜನಸ್ನೇಹಿ ಪೊಲೀಸ್ ವಾಟ್ಸ್ಯಾಪ್ ಗ್ರೂಪ್ ಮತ್ತು ಹಿಂದೂ ಯುವ ಶಕ್ತಿ ಆಲಡ್ಕ ಕ್ಷೇತ್ರ ಇವರ ನೇತೃತ್ವದಲ್ಲಿ ಮತ್ತು ಅಳದಂಗಡಿ ಗ್ರಾಮ ಪಂಚಾಯತ್ ಸಹಕಾರದೊಂದಿಗೆ ಎ.15ರಂದು ಅಳದಂಗಡಿಯಿಂದ ಕೆದ್ದುವರೆಗಿನ ರಸ್ತೆಯಲ್ಲಿ ಸ್ಯಾನಿಟೈಸರ್ ಸಿಂಪಡಿಸಲಾಯಿತು.

ಜನಸ್ನೇಹಿ ಪೊಲೀಸ್ ವಾಟ್ಸ್ಯಾಪ್ ಗ್ರೂಪಿನ ಪ್ರಶಾಂತ್ ಹಾಗೂ ಹಿಂದೂ ಯುವ ಶಕ್ತಿ ಅಲಡ್ಕ ಕ್ಷೇತ, ಅಳದಂಗಡಿ ಮಹಾಗಣಪತಿ ಹಾರ್ಡ್‍ವೇರ್ಸ್‍ನ ಚಂದ್ರಶೇಖರ ಇವರು ನೇತೃತ್ವ ವಹಿಸಿದ್ದರು.

ಈ ಸಂದರ್ಭದಲ್ಲಿ ಅಳದಂಗಡಿ ಶ್ರೀ ಸತ್ಯದೇವತೆ ದೈವಸ್ಥಾನದ ಅಡಳಿತದಾರ ಶಿವಪ್ರಸಾದ ಅಜಿಲ, ಅಳದಂಗಡಿ ಗ್ರಾ.ಪಂ ಅಧ್ಯಕ್ಷ ಸತೀಶ್ ಕುಮಾರ್ ಮಿತ್ತಮಾರ್, ವೇಣೂರು ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ಲೋಲಾಕ್ಷ, ದಂತವೈದ್ಯ ಡಾ. ಶಶಿಧರ ಡೋಂಗ್ರೆ, ಅಳದಂಗಡಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಇಮ್ತಿಯಾಜ್, ಕಾರ್ಯದರ್ಶಿ ಶ್ರೀನಿವಾಸ ಎಂ. ಹಾಗೂ ಹಿಂದೂ ಯುವ ಶಕ್ತಿ ಅಲಡ್ಕ ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.