ಶ್ರೀಮತಿ ಕಲ್ಯಾಣಿ ಕಾರಿಂಜ ನಿಧನ

ನಾವೂರು: ಇಲ್ಲಿಯ ಕಾರಿಂಜ ಅಣ್ಣಪ್ಪ ಸಾಲ್ಯಾನ್ ಅವರ ಪತ್ನಿ ಶ್ರೀಮತಿ ಕಲ್ಯಾಣಿ (69) ಹೃದಯಾಘಾತದಿಂದ ಎ.13ರಂದು ಮೃತಪಟ್ಟಿದ್ದಾರೆ.

ಮೃತರು ಪತಿ, ಐವರು ಪುತ್ರರಾದ ಬೆಳಾಲು ಗ್ರಾ.ಪಂ. ಪಿಡಿಒ ಮೋಹನ್ ಬಂಗೇರ, ಪುರುಷೋತ್ತಮ, ಕುಶಾಲಪ್ಪ, ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಅಧ್ಯಕ್ಷರು ಹಾಗೂ ರಾಜ್ಯ ಕುಲಾಲ ಕುಂಬಾರರ ಯುವವೇದಿಕೆಯ ರಾಜ್ಯ ಕಾರ್ಯದರ್ಶಿಯಾದ ಹರೀಶ್ ಕಾರಿಂಜ, ಯುವರಾಜ್, ಐವರು ಪುತ್ರಿಯರಾದ ಶಾಂತಾ, ನಾಗವೇಣಿ, ಭವಾನಿ, ಜಯಲಕ್ಷ್ಮೀ, ಸುಮಿತ್ರಾ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ಮನೆಗೆ ಶಾಸಕ ಹರೀಶ್ ಪೂಂಜ, ಮಾಜಿ ಶಾಸಕ ವಸಂತ ಬಂಗೇರ, ಕುಲಾಲ ಸಂಘದ ಪದಾಧಿಕಾರಿಗಳಾದ ಯತೀಶ್ ಸಿರಿಮಜಲು, ಮೋಹನ್ ಕಂಚಿಂಜ, ಲೋಕೇಶ್ ಕುಲಾಲ್, ವಿಮಲಾ ಕಂಚಿಂಜ, ಪುಷ್ಪರಾಜ್ ಲಾಯಿಲ, ಸಂತೋಷ್ ಭಾರ್ಗವಿ, ಉಮೇಶ್ ಕುಲಾಲ್, ಬಂಗಾಡಿ ಸಿ.ಎ ಬ್ಯಾಂಕ್ ಅಧ್ಯಕ್ಷ ಹರೀಶ್ ಸಾಲ್ಯಾನ್, ತಾ.ಪಂ.ಉಪಾಧ್ಯಕ್ಷೆ ವೇದಾವತಿ, ತಾ.ಪಂ. ಮಾಜಿ ಉಪಾಧ್ಯಕ್ಷೆ ತನುಜಾ ಶೇಖರ್, ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಆಗಮಿಸಿ ಮೃತರ ಅಂತಿಮ ದರ್ಶನ ಪಡೆದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.