ಆಪ್ ಮೂಲಕ ಸರಕಾರದ ಸಿಎಎಸ್‌ಸಿ-ವಿಎಲ್‌ಇ ಸೇವೆ “ಅನುಗ್ರಹ ಜನ ಸೇವಾ ಕೇಂದ್ರದ” ಹೊಸ ಆಪ್

ಬೆಳ್ತಂಗಡಿ: ಲಾಕ್‌ಡೌನ್ ನಿಯಮಾವಳಿಗಳನ್ನು ಪಾಲಿಸುವ ನಾಗರಿಕರ ಹಿತದೃಷ್ಟಿಯಿಂದ ಅನುಗ್ರಹ ಎಜುಕೇಶನ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್ ಬೆಳ್ತಂಗಡಿ ಇದರ ಅಂಗ ಸಂಸ್ಥೆಯಾದ ಸರ್ಕಾರದ ಸಾಮಾನ್ಯ ಕೇಂದ್ರ ಮತ್ತು ಸೇವಾ ಸಿಂಧು ಕೇಂದ್ರ “ಅನುಗ್ರಹ ಜನ ಸೇವಾ ಕೇಂದ್ರವು” ಹೊಸ ಆಪ್ ಒಂದನ್ನು ಆವಿಷ್ಕರಿಸಿದೆ. 

ಆಪ್ ಲಿಂಕ್ ಅನ್ನು ಕ್ಲಿಕ್ ಮಾಡಿ ಜನತೆಗೆ ಅಗತ್ಯತೆ ಇರುವ ನಾಗರಿಕಾ ಸೇವೆಗಳನ್ನು ಆಯ್ಕೆ ಮಾಡಿ ಭರ್ತಿಗೊಳಿಸಿ ಆನ್ಲೈನ್ ಮೂಲಕ ಸಲ್ಲಿಸಿದರೆ ಜನರನ್ನು ಸಂಪರ್ಕಿಸಿ ಅವರು ಇದ್ದ ಸ್ಥಳಕ್ಕೇ ಹೋಗಿ ಸೇವೆಗಳನ್ನು ಒದಗಿಸಲು ಪ್ರಯತ್ನಿಸುವ ಬಗ್ಗೆ ನಿರ್ಧಾರ ಕೈಗೊಂಡಿದೆ ಎಂದು ಸಂಸ್ಥೆಯ ಮುಖ್ಯಸ್ಥ ತಲ್‌ಹತ್ ಎಂ.ಜಿ ತಿಳಿಸಿದ್ದಾರೆ.
ಬೆಳ್ತಂಗಡಿ ನಗರದ ಬಸ್ಟ್ಯಾಂಡ್ ಎದುರೇ ಕಚೇರಿ ಹೊಂದಿ, ಸರಕಾರದ ಅಂಗೀಕೃತ ಸಿಎಸ್‌ಸಿ(ಕಾಮನ್ ಸರ್ವಿಸ್ ಸೆಂಟರ್) ಮತ್ತು ವಿಎಲ್‌ಇ(ವಿಲೇಜ್ ಲೆವೆಲ್ ಎಂಟರ್‌ಪ್ರೀನಿಯರ್) ಕೇಂದ್ರದ ಮೂಲಕ ಅನೇಕ ಬಗೆಯ ಸರಕಾರದ ವಿವಿಧ ಯೋಜನೆಗಳ ಆನ್ಲೈನ ಸೇವೆ ನೀಡುತ್ತಿದ್ದ ಸಂಸ್ಥೆ ಲಾಕ್‌ಡೌನ್ ನಿಂದ ಅಗತ್ಯ ಸೇವೆ ಲಭ್ಯವಾಗದೇ ಸಮಸ್ಯೆಯಾಗಿರುವವರಿಗೆ ಈ ಆಪ್ ವರದಾನವಾಗಿದೆ.

ಹೋಮ್ ಟ್ಯೂಷನ್ ವ್ಯವಸ್ಥೆ:
ಲಾಕ್‌ಡೌನ್‌ನಿಂದಾಗಿ ಎಲ್‌ಕೆಜಿ ಮತ್ತು 10 ನೇ ತರಗತಿ ವರೆಗಿನ ವಿದ್ಯಾರ್ಥಿಗಳು ಮನೆಯಲ್ಲೇ ಇರುವಂತಾಗಿದ್ದು ಅವರ ಶೈಕ್ಷಣಿಕ ಸಮಯ ವ್ಯರ್ಥವಾಗುತ್ತಿರುವುದರಿಂದ ಆಪ್ ಮೂಲಕ ಮನವಿ ಸಬ್‌ಮಿಟ್ ಮಾಡಿದರೆ ನುರಿತ ಶಿಕ್ಷಕರಿಂದ “ಹೋಮ್ ಟ್ಯೂಶನ್” ವ್ಯವಸ್ಥೆಯನ್ನೂ ಮಾಡಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.