ಕೋವಿಡ್-19 ಸೋಂಕು ಪತ್ತೆಯಾದ ಪ್ರದೇಶದಲ್ಲಿ ಕಾರ್ಯನಿರ್ವಹಿಸಿದ 30 ಸ್ವಯಂಸೇವಕರಿಗೆ ಅಭಿನಂದನೆ ಸಲ್ಲಿಕೆ ಸಾಮಾಜಿಕ ಅಂತರ ಕಾಯ್ದುಕೊಂಡು ಸಾಂಕೇತಿಕವಾಗಿ ಅಭಿನಂದನೆ

Advt_NewsUnder_1
Advt_NewsUnder_1
Advt_NewsUnder_1

ಕಲ್ಲೇರಿ: ಬೆಳ್ತಂಗಡಿ ತಾಲೂಕಿನ ತಣ್ಣೀರುಪಂಥ ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಾಯ ಗ್ರಾಮ ಕಲ್ಲೇರಿಯಲ್ಲಿ ಕೊರೊನಾ ವೈರಸ್ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ 14 ದಿನ ದಿಗ್ಬಂಧನ ಹೇರಿದ್ದ ಸಂದರ್ಭದಲ್ಲಿ ಸೇವೆ ಸಲ್ಲಿಸಿದ 30 ಮಂದಿ ಸ್ವಯಂ ಸೇವಕರಿಗೆ ಅಭಿನಂದನೆ ಸಲ್ಲಿಸಲಾಯಿತು.

ಕಲ್ಲೇರಿಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಎ.13ರಂದು ತಣ್ಣೀರುಪಂಥ ಗ್ರಾಮ ಪಂಚಾಯತ್ ಅಧ್ಯಕ್ಷರು ಜಯವಿಕ್ರಮ ಅವರ ನೇತೃತ್ವದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಸಾಂಕೇತಿಕವಾಗಿ ಅಭಿನಂದನೆ ಕಾರ್ಯಕ್ರಮ ನಡೆಸಲಾಯಿತು.

ಬಡ ಕುಟುಂಬಗಳಿಗೆ ಅಕ್ಕಿ ವಿತರಣೆ:
ಈ ಸಂದರ್ಭದಲ್ಲಿ ಗ್ರಾಮಕ್ಕೆ ವಿವಿಧ ಸಂಘಟನೆಗಳು ಸಂಘ-ಸಂಸ್ಥೆಗಳಿಂದ ಹಾಗೂ ದಾನಿಗಳಿಂದ ಸಂಗ್ರಹಿಸಿದ ಸಹಾಯಧನದಿಂದ ಒಟ್ಟು 350 ಕುಟುಂಬಗಳಿಗೆ ತಲಾ 10ಕೆ.ಜಿಯಂತೆ ಕುಚ್ಚಲಕ್ಕಿಯನ್ನು ವಿಧಾನಪರಿಷತ್ ಸದಸ್ಯರಾದ ಹರೀಶ್ ಕುಮಾರ್ ವಿತರಿಸಿದರು.
ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್, ಕೋಟಿ ಚೆನ್ನಯ್ಯ ಫ್ರೆಂಡ್ಸ್ ಕ್ಲಬ್ ಮಾರಿ ಪಾದೆ ವೀರೇಂದ್ರ ಬಳ್ಳಾಲ್ ಬಿಜಿಲ, ಯುವ ವಾಹಿನಿ ಉಪ್ಪಿನಂಗಡಿ ಬದ್ರಿಯಾ ಜುಮ್ಮಾ ಮಸೀದಿ ತುರ್ಕಳಿಕೆ ಜುಮ್ಮಾ ಮಸೀದಿ, ಕುಪ್ಪೆಟ್ಟಿ ಮಸೀದಿ, ತಣ್ಣೀರುಪಂಥ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸದಾನಂದ ಶೆಟ್ಟಿ ಅವರು ಅಕ್ಕಿ ವಿತರಿಸಲು ಧನ ಸಹಾಯ ಮಾಡಿದರು.

ಕಾಣಿಯೂರು ಜಿಲ್ಲಾ ಪಂಚಾಯಿತಿ ಸದಸ್ಯ ಶಾಹುಲ್ ಹಮೀದ್, ತಾಲೂಕು ಪಂಚಾಯತ್ ಸದಸ್ಯೆ ಕೇಶವತಿ, ವ್ಯವಸಾಯ ಸೇವಾ ಸಹಕಾರಿ ಸಂಘ ಬ್ಯಾಂಕ್ ತಣ್ಣೀರು ಪಂಥ ಅಧ್ಯಕ್ಷ ನಿರಂಜನ್  ಬಾವಂತಬೆಟ್ಟು  ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಕೆ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಆದಂ, ತಾಜುದ್ದೀನ್, ಅಬ್ದುಲ್ ರೆಹಮಾನ್, ನವೀನ್ ಕುಮಾರ್, ಸೂರಪ್ಪ ಬಂಗೇರ, ನಿಝಾರ್ ಸ್ವಯಂ ಸೇವಕ ಸಂಘದ ನಾಯಕ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೈಲೇಶ್ ಕುಮಾರ್ ಕೆ, ಬೆಳ್ತಂಗಡಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕೆಪಿಸಿಸಿ ಎಸ್ಸಿ ಘಟಕ ಸದಸ್ಯ ನಾಗರಾಜ್ ಎಸ್ ಲಾಯಿಲ ಅಯುಬ್ ಡಿ.ಕೆ ಕಲ್ಲೇರಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.