ನಗರ ಪಂಚಾಯತ್ 11ನೇ ವಾರ್ಡ್ ನ ಸದಸ್ಯ ಜಯಾನಂದ ಗೌಡ ನೇತೃತ್ವದಲ್ಲಿ ಬಡ ಕುಟುಂಬಗಳಿಗೆ ಶಾಸಕ ಹರೀಶ್ ಪೂಂಜರಿಂದ ಅಕ್ಕಿ ವಿತರಣೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕೊರೊನಾ ವೈರಸ್‍ನಿಂದ ಲಾಕ್‍ಡೌನ್‍ನಿಂದಾಗಿ ಅಗತ್ಯ ಸಾಮಾಗ್ರಿಗಳ ಖರೀದಿಗೆ ಸಂಕಷ್ಟವಾದ ಕುಟುಂಬಗಳಿಗೆ ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯ 11ನೇ ವಾರ್ಡ್‍ನಲ್ಲಿ ಶಾಸಕ ಹರೀಶ್ ಪೂಂಜ ಅವರು ಅಕ್ಕಿ ವಿತರಿಸಿದರು. 

ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯ 11ನೇ ವಾರ್ಡ್‍ನಲ್ಲಿ ಎ.13ರಂದು ಗುಂಪಾಲಾಜೆ, ಬೊಟ್ಟುಗುಡ್ಡೆ, ಕೆಲ್ಲಗುತ್ತು, ಜೈನ್‍ಪೇಟೆಯಲ್ಲಿನ 45 ಬಡ ಕುಟುಂಬಗಳಿಗೆ ಶಾಸಕ ಹರೀಶ್ ಪೂಂಜ ಅವರು ದಾನಿಗಳು ನೀಡಿರುವ ಅಕ್ಕಿ ಹಾಗೂ ಅಗತ್ಯ ಸಾಮಾಗ್ರಿಗಳನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ 11ನೇ ವಾರ್ಡ್‍ನ ನಗರ ಪಂಚಾಯತ್ ಸದಸ್ಯ ಜಯಾನಂದ ಗೌಡ ಹಾಗೂ ಕಿರಣ್ ಕುಮಾರ್ ಶೆಟ್ಟಿ, ಭುಜಂಗ ಶೆಟ್ಟಿ, ಬಾಲಕೃಷ್ಣ ಗೌಡ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.