HomePage_Banner_
HomePage_Banner_

ಗೇರುಕಟ್ಟೆ ದರ್ಖಾಸ್ ನದಿ ಪರಿಸರದಲ್ಲಿ ಅಕ್ರಮ ಜೂಜಾಟ ಸರ್ಕಲ್ ಇನ್ಸ್‌ಪೆಕ್ಟರ್ ತಂಡದಿಂದ ದಾಳಿ

ಗೇರುಕಟ್ಟೆ: ಕೊರೊನಾ ವೈರಸ್ ದೇಶವ್ಯಾಪಿ ಹಬ್ಬಿದ್ದು ಇಡೀ ಭಾರತವೇ ಲಾಕ್ ಡೌನ್ ಅಗಿದ್ದು ಈ ನಡುವೆ ತಾಲೂಕಿನ ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೇರುಕಟ್ಟೆ ದಾರ್ಖಾಸ್ ಹೊಳೆ ಪಕ್ಕದಲ್ಲಿ ಹಲವು ದಿನಗಳಿಂದ ಜೂಜಾಡುತ್ತಿದ್ದ ಸ್ಥಳಕ್ಕೆ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ಮತ್ತು ತಂಡ ದಾಳಿ ಮಾಡಿದೆ. ಆದರೆ ಈ ಸಂದರ್ಭ ಎಲ್ಲ ಆರೋಪಿಗಳು ಪರಾರಿಯಾಗಿದ್ದಾರೆಂದು ತಿಳಿದುಬಂದಿದೆ.

ಇಲ್ಲಿ ಅಡ್ಡೆ ನಡೆಯುತ್ತಿದ್ದು ಇಲ್ಲಿಗೆ ಬರುವವರು ಬೇರೆ ಕಡೆ ವಾಹನ ನಿಲ್ಲಿಸಿ ಬಂದು ಭಾಗಿಯಾಗುತ್ತಾರೆ ಎಂದು ಸ್ಥಳೀಯರು ತಿಳಿಸಿದ್ದು, ಘಟನೆಯ ದಿನ ಯಾರೊಬ್ಬರ ಬಂಧನವಾಗದಿದ್ದರೂ ಜೂಜುಕೋರರಿಗೆ ಭಯದ ವಾತಾವರಣ ಉಂಟಾಗಿರುವುದು ಕೊಂಚ ಆನಂದ ತಂದಿದೆ ಎಂದು ಹೇಳಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.