ಲಯನ್ಸ್ ಕ್ಲಬ್ ಬೆಳ್ತಂಗಡಿ ಯಿಂದ ಸರಕಾರಿ ಆಸ್ಪತ್ರೆಗೆ ಪಿಪಿಇ ಕಿಟ್ ಹಸ್ತಾಂತರ

ಬೆಳ್ತಂಗಡಿ; ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಇದರ ಬೆಳ್ತಂಗಡಿ ಘಟಕದ ವತಿಯಿಂದ ತಾಲೂಕು ಸಮುದಾಯ ಆಸ್ಪತ್ರೆಯ ವೈದ್ಯರು ಮತ್ತು ದಾದಿಯರಿಗೆ ಕೊರೊನಾ ಕರ್ತವ್ಯಕ್ಕೆ ಅನುಕೂಲವಾಗುವಂತೆ ಸುಮಾರು 75 ಸಾವಿರ ರೂ. ಮೌಲ್ಯದ ವೈಯುಕ್ತಿಕ ಸುರಕ್ಷತಾ (P.P.E) ಕಿಟ್ ನ್ನು ವಿತರಿಸಲಾಯಿತು.

ಶಾಸಕ ಹರೀಶ್ ಪೂಂಜ ಅವರು ಅತಿಥಿಗಳಾಗಿ ಕಿಟ್ಟ್ ಟನ್ನು ಹಸ್ತಾಂತರಿಸಿದರು.
ಆಸ್ಪತ್ರೆಯ ಪರವಾಗಿ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ವಿದ್ಯಾವತಿಯರು ಕೊಡುಗೆ ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಆರೋಗ್ಯಧಿಕಾರಿ ಡಾ.ಕಲಾಮಧು ಶೆಟ್ಟಿ, ಲಯನ್ಸ್ ಕ್ಲಬ್ ಅಧ್ಯಕ್ಷ, ಶ್ರದ್ಧಾ ಎಂಟರ್ ಪ್ರೈಸಸ್ ಮಾಲಕ ವಸಂತ ಶೆಟ್ಟಿ ,‌ಲಯನ್ಸ್ ಪ್ರಾಂತೀಯ ಅಧ್ಯಕ್ಷ ರಾಜು ಶೆಟ್ಟಿ ಬೆಂಗೆತ್ಯಾರ್, ಲಯನ್ಸ್ ರಾಜ್ಯಪಾಲರ ಸಂಪುಟದ ಪದಾಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ, ಬೆಳ್ತಂಗಡಿ ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಯಿಲ, ಮಾಜಿ ಕೋಶಾಧಿಕಾರಿ ಮಂಜುನಾಥ್, ರವೀಂದ್ರ ಶೆಟ್ಟಿ ಬಳಂಜ, ಪ್ರಸಾದ‌ ಶೆಟ್ಟಿ ಏಣಿಂಜ, ಸುಭಾಷಿನಿ, ಅಶ್ರಫ್ ಆಲಿಕುಂಞಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.