ಖಾಸಗಿ ಬಸ್ ನೌಕರರ ಸಂಘದಿಂದ 70 ಮಂದಿ ಸದಸ್ಯರಿಗೆ ಆಹಾರ ಕಿಟ್ ವಿತರಣೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ -ಉಪ್ಪಿನಂಗಡಿ ಖಾಸಗಿ ಬಸ್ಸು ನೌಕರರ ಸಂಘದಿಂದ ಸಂಘದ ಸದಸ್ಯರಾಗಿದ್ದು ಲಾಕ್‌ಡೌನ್‌ನಿಂದ ಸಮಸ್ಯೆಗೊಳಗಾಗಿರುವ ಆಯ್ದ 70 ಮಂದಿಗೆ ಆಹಾರ ಸಾಮಾಗ್ರಿಗಳ ಕಿಟ್ಟ್ ಆನ್ನು ಕೊಡುಗೆಯಾಗಿ ಹಸ್ತಾಂತರಿಸಲಾಯಿತು.


ಯಾವುದೇ ಉದ್ಯೋಗ ಭದ್ರತೆ ಇಲ್ಲದೆ ಅಸಂಘಟಿತ ಕಾರ್ಮಿಕರಾಗಿ ಬದುಕು ಸಾಗಿಸುತ್ತಿರುವ ಈ ಖಾಸಗಿ ಬಸ್ಸು ನೌಕರರು ಇದೀಗ ಲಾಕ್‌ಡೌನ್‌ನಿಂದ ಕೆಲಸ ಇಲ್ಲದೆ ಸಂಕಷ್ಟ ಎದುರಿಸುತ್ತಿರುವ ಈ ಸಂದಿಗ್ಧ ಸಂದರ್ಭದಲ್ಲಿ ಅವರಿಗೆ ನೆರವು ನೀಡುವ ಉದ್ಧೇಶದಿಂದ ಸಂಘದಿಂದ ಈ ನೆರವು ನೀಡಲಾಗಿದೆ.

ಖಾಸಗಿ ಬಸ್ಸು ನೌಕರರ ಸಂಘದ ಅಧ್ಯಕ್ಷ ಸಿದ್ದಿಕ್ ಕೆಂಪಿ ಇವರ ಮುಂದಾಳತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಪದ್ಮಪ್ರಸಾದ್ ಜೈನ್, ಪ್ರಧಾನ ಕಾರ್ಯದರ್ಶಿ ಹಾಗೂ ರಾಜ ಕೇಸರಿ ಸಂಸ್ಥಾಪಕ ದೀಪಕ್ ಜಿ ಬೆಳ್ತಂಗಡಿ, ಕೋಶಾಧಿಕಾರಿ ಇಲ್ಯಾಸ್ ಕರಾಯ ಮತ್ತು ಸದಸ್ಯರಾದ ಚಾಬಾಕ, ಚಿದಾನಂದ ಸಾಲಿಯಾನ್, ಮನ್ಸೂರು, ಶರತ್, ಶರೀಫ್ ಇವರುಗಳು ಜೊತೆಯಾಗಿ ನೌಕರರ ಮನೆ ಮನೆಗೇ ಈ ಕಿಟ್ಟ್‌ಗಳನ್ನು ತಲುಪಿಸಿ ಸಾಮಾಜಿಕ ಮತ್ತು ಸಂಘಟನಾ ಜವಾಬ್ಧಾರಿ ಮೆರೆದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.