ದೈವಗಳ ಸೇವೆ ಮಾಡುವ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ವಿತರಣೆ ತಾಲೂಕಿನಲ್ಲಿನ 128 ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿದ ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಕೊರೊನಾ ವೈರಸ್ ಹರಡದಂತೆ ತಡೆಯಲು ಲಾಕ್‍ಡೌನ್ ಘೋಷಣೆಯಿಂದ ಸಂಕಷ್ಟಕ್ಕೆ ಸಿಲುಕಿರುವ ತಾಲೂಕಿನ ವಿವಿಧ ಗ್ರಾಮಗಳಲ್ಲಿ ದೈವಗಳ ಸೇವೆ ಮಾಡುವ 128 ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್‍ಗಳನ್ನು ಶಾಸಕ ಹರೀಶ್ ಪೂಂಜ ವಿತರಿಸಿದರು.

ತುಳುನಾಡಿನ ಹೆಮ್ಮೆಯ ಕಲಾಪ್ರಕಾರವಾದ ಭೂತಾರಾಧನೆ ನಿರ್ಬಂಧದಿಂದ ದೈವ ದೇವರುಗಳ ಸೇವೆ ಮಾಡುವ ಕುಟುಂಬಗಳಿಗೆ ದೈನಂದಿನ ಜೀವನಕ್ಕೆ ತೊಂದರೆಯಾಗದಿರಲಿ ಎಂಬ ದೃಷ್ಟಿಯಿಂದ ತಾಲೂಕಿನ ವಿವಿಧೆಡೆ ವಾಸಿಸುವ ಕುಟುಂಬಗಳಿಗೆ ಅಗತ್ಯ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಗಿದೆ.

ನಮ್ಮನ್ನು ಕಾಯುವ ತುಳುನಾಡಿನ ದೈವ ದೇವರುಗಳಿಗೆ ಈ ಸಮಯದಲ್ಲಿ ನಮ್ಮೂರಿನ ದೈವಗಳಿಗೆ ಗಗ್ಗರ, ತಂಬಿಲ ಸೇವೆ ನಡೆಯುವ ಕಾಲದಲ್ಲಿ ಈ ಕುಟುಂಬಗಳಿಗೆ ಲಾಕ್‍ಡೌನ್ ಘೋಷಣೆಯಿಂದ ಕಷ್ಟಕಾಲ ಎದುರಾಗಿ ತೊಂದರೆಯಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.