ಗೇರುಕಟ್ಟೆ ಬಿರುವೆರ್ ಕುಡ್ಲದಿಂದ ಆಹಾರ ಸಾಮಾಗ್ರಿಗಳ ವಿತರಣೆ

ಗೇರುಕಟ್ಟೆ : ಕೊರೊನಾ ವೈರಸ್ ಹರಡದಂತೆ ತಡೆಯಲು ಲಾಕ್‍ಡೌನ್ ಘೋಷಿಸಿದ್ದರಿಂದ ಅಗತ್ಯ ಸಾಮಾಗ್ರಿಗಳ ಖರೀದಿಸಲು ತೊಂದರೆಯಾದ 9 ಬಡ ಕುಟುಂಬಗಳಿಗೆ ಬಿರುವೆರ್ ಕುಡ್ಲ ಸಂಘವು ಆಹಾರ ಸಾಮಾಗ್ರಿ ಕಿಟ್ ವಿತರಿಸಿದೆ.

ಗೇರುಕಟ್ಟೆಯಲ್ಲಿ ಎ.10 ರಂದು ಅಕ್ಕಿ, ಸಕ್ಕರೆ, ಪದಾರ್ಥಗಳ ದಿನಸಿ ಸಾಮಾಗ್ರಿಗಳ ಒಳಗೊಂಡ ಆಹಾರ ಸಾಮಾಗ್ರಿಗಳ ಕಿಟ್‍ಗಳನ್ನು ವಲಯ ಅಧ್ಯಕ್ಷರಾದ ಯೋಗೀಶ್ ಸುವರ್ಣ ಅಡ್ಡಕೊಡಂಗೆ ಅವರ ನೇತೃತ್ವದಲ್ಲಿ ವಿತರಿಸಲಾಯಿತು.

ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಶ್ರೀನಿವಾಸ ಬೆರ್ಕೆತ್ತೋಡಿ, ನಾಣ್ಯಪ್ಪ ಪೂಜಾರಿ ಕಲ್ಲಾಪು, ಸತೀಶ್ ಗೇರುಕಟ್ಟೆ, ದಾಮೋದರ ಇಡ್ಯಾ, ನವೀನ್, ಗುರುಕಿರಣ್ ಬಡಿನೆಡೆ, ಯೋಗೀಶ್ ಸುವರ್ಣ, ಸಚಿನ್ ಸಾಲಿಯಾನ್ ಗೇರುಕಟ್ಟೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.