ಶಿರ್ಲಾಲು, ನಾರಾವಿಯಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ


ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮ ಸೇರಿದಂತೆ ನಾರಾವಿ ಪ್ರದೇಶಗಳಲ್ಲಿ ಶುಕ್ರವಾರ ಆಲಿಕಲ್ಲು ಸಹಿತ ಭಾರಿ ಮಳೆ ಸುರಿದಿದೆ.

ಎ.10ರ ಮಧ್ಯಾಹ್ನ ನಂತರ ಮೋಡ ಮುಸುಕಿದ ವಾತಾವರಣ ಕೂಡಿದ್ದ ಶಿರ್ಲಾಲು, ನಾರಾವಿ ಪ್ರದೇಶಗಳಲ್ಲಿ ಮಧ್ಯಾಹ್ನ 3.30ರ ನಂತರ ಭಾರಿ ಮಳೆಯಾಗಿದೆ. ಶಿರ್ಲಾಲು, ನಾರಾವಿಯಲ್ಲಿ ಆಲಿಕಲ್ಲು ಸಹಿತ ಮಳೆಯಿಂದ ಜನರು ಪುಳಕಿತಗೊಂಡಿದ್ದಾರೆ. ಬೆಳ್ತಂಗಡಿ ಪಟ್ಟಣದಲ್ಲಿ ಮಳೆ ಸಿಂಚನ ಪಡಿಸಿದರೆ ಕೆಲವೆಡೆ ಸಾಧಾರಣ ಮಳೆಯಾಗಿದೆ.


ಟ್ರಾನ್ಸ್ ಫಾರ್ಮರ್ ಗೆ ಹಾನಿ :
ಮೋಡ ಕವಿದ ವಾತಾವರಣಕ್ಕೆ ಮಳೆ ಮುನ್ಸೂಚನೆಯಾಗಿ ಭಾರಿ ಗಾಳಿ ಬೀಸಿದ ಪರಿಣಾಮ ಮರೋಡಿ ಗ್ರಾಮದ ಪೆರಾಡಿ ಕ್ರಾಸ್‍ನಲ್ಲಿರುವ ಟ್ರಾನ್ಸ್ ಫಾರ್ಮರ್ ಕಂಬವು ಭಾರಿ ಗಾಳಿಗೆ ತುಂಡಾಗಿ ಬಿದ್ದಿದೆ.

ತೋಟಕ್ಕೆ ಬಡಿದ ಸಿಡಿಲು:
ಶಿರ್ಲಾಲಿನಲ್ಲಿ ಸುರಿದ ಆಲಿಕಲ್ಲು ಸಹಿತ ಭಾರಿ ಮಳೆಗೆ ಕೃಷಿಕರೊಬ್ಬರ ತೋಟಕ್ಕೆ ಬಡಿದ ಸಿಡಿಲಿಗೆ ಅಡಿಕೆ ಮರ, ಬಾಳೆಗಿಡಗಳ ಕೃಷಿಗೆ ಹಾನಿಯಾಗಿ ಸುಟ್ಟು ಕರಕಲಾಗಿವೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.