ಕ್ಯಾಂಪ್ಕೋದಲ್ಲಿ ಎ.12ರಿಂದ ಸೀಮಿತವಾಗಿ ಅಡಿಕೆ ಖರೀದಿ ಒಬ್ಬ ಸದಸ್ಯರಿಗೆ ತಿಂಗಳಲ್ಲಿ ಗರಿಷ್ಠ 1 ಕ್ವಿಂಟಾಲ್ ಮಾರಾಟಕ್ಕೆ ಅವಕಾಶ

ಬೆಳ್ತಂಗಡಿ : ಕ್ಯಾಂಪ್ಕೋ ಎ.9ರಿಂದ ಕೊಕ್ಕೋ ಖರೀದಿ ಆರಂಭಿಸಿರುವ ಬೆನ್ನಿಗೆ ಅಡಿಕೆ ಖರೀದಿ ಬಗ್ಗೆಯು ಸಿದ್ಧತೆ ನಡೆಸಿದ್ದು, ಎ.12ರಿಂದ ಕೆಲವು ನಿಯಮಗಳನ್ನು ರೂಪಿಸಿ ಆಯಾ ಶಾಖೆಗಳಲ್ಲಿ ಸೀಮಿತವಾಗಿ ಅಡಿಕೆ ಖರೀದಿಸಲು ನಿರ್ಧರಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಅಡಿಕೆ ಮಾರಾಟಕ್ಕೆ ಬರುವ ಸದಸ್ಯರು ಆಯಾ ಶಾಖೆಗಳಿಗೆ ಬರುವಾಗ ಕ್ಯಾಂಪ್ಕೋ ಸದಸ್ಯತ್ವದ ಗುರುತು ಚೀಟಿ, ಕ್ಯಾಂಪ್ಕೋ ಕಾರ್ಡು, ಪಹಣಿ ಪತ್ರವನ್ನು ತಮ್ಮೊಂದಿಗೆ ಇಟ್ಟುಕೊಳ್ಳುವುದರ ಜತೆಗೆ ಕಡ್ಡಾಯವಾಗಿ ಮುಖಗವುಸು ( ಮಾಸ್ಕ್ ) ಹಾಕಿಕೊಂಡು ಕನಿಷ್ಠ 3 ಅಡಿಗಳ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳತಕ್ಕದ್ದು. ಮುಂದಿನ ದಿನಗಳಲ್ಲಿ ಕೊಕ್ಕೋ ಖರೀದಿ ಅವಧಿ ವಿಸ್ತರಣೆ, ಇತರ ಕಡೆಗಳಲ್ಲೂ ಖರೀದಿ ನಡೆಸಬೇಕೇ ಎಂಬ ಬಗ್ಗೆ ನಿರ್ಧರಿಸಲಾಗುವುದು ಎಂದಿದೆ. ಅಡಿಕೆ ಮಾರಾಟ ಮಾಡಲು ಈ ವರೆಗೆ ಆಯಾ ಶಾಖೆಗಳಲ್ಲಿ ಸದಸ್ಯರಾಗಿರುವವರಿಗೆ ಮಾತ್ರ ಅವಕಾಶ ಇರಲಿದೆ.

ಕ್ಯಾಂಪ್ಕೋ ರೂಪಿಸಿದ ನಿಯಮಗಳೇನು?
1. ಒಬ್ಬ ಸದಸ್ಯರಿಗೆ ಒಂದು ತಿಂಗಳಲ್ಲಿ ಗರಿಷ್ಠ 1 ಕ್ವಿಂಟಾಲ್ ಅಥವಾ ರೂ.25,000 ದ ಅಡಿಕೆ ಮಾರಾಟಕ್ಕೆ ಅವಕಾಶ.
2. ಪ್ರತಿದಿನ 20 ಸದಸ್ಯರಿಗೆ ಮಾತ್ರ ಅವಕಾಶ.
3. ಆಯಾ ಶಾಖಾಧಿಕಾರಿಗಳ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಟೋಕನ್ ಪಡೆದುಕೊಳ್ಳಬೇಕು. ದಿನದ ಗರಿಷ್ಠ ಮಿತಿಯ (20 ಸದಸ್ಯರು)ಬಳಿಕ ಮುಂದಿನ ದಿನಕ್ಕೆ ಟೋಕನ್ ಪಡೆಯಬೇಕು.
4. ಖರೀದಿ ಸಮಯ : ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 2.00ರ ವರೆಗೆ.

ಅಡಿಕೆ ಖರೀದಿಸುವ ಶಾಖೆಗಳ ವಿವರ .
ಬೆಳ್ತಂಗಡಿ
ಕೊಕ್ಕೊ : ಸೋಮವಾರ
ಅಡಿಕೆ : ಮಂಗಳವಾರ, ಬುಧವಾರ, ಶುಕ್ರವಾರ.
ಸಂಪರ್ಕ : ಉದಯ ಕುಮಾರ್ ಮೊ:. 9880903258.
ಕಚೇರಿ : 08256 – 298245.

ಉಪ್ಪಿನಂಗಡಿ
ಅಡಿಕೆ ಮಾತ್ರ
ಅಡಿಕೆ : ಸೋಮವಾರ, ಬುಧವಾರ, ಶುಕ್ರವಾರ.
ಸಂಪರ್ಕ : ಕ್ರಪೇಶ್ ರೈ ಮೊ:..9481759830.
ಕಛೇರಿ : 08251 – 252020.

ಪುತ್ತೂರು
ಕೊಕ್ಕೊ : ಶುಕ್ರವಾರ
ಅಡಿಕೆ : ಸೋಮವಾರ, ಬುಧವಾರ, ಗುರುವಾರ.
ಸಂಪರ್ಕ : ರಾಜೇಶ್ ಮೊ:. 8317494942
ಕಛೇರಿ : 08251- 231563

ವಿಟ್ಲ
ಕೊಕ್ಕೊ : ಗುರುವಾರ
ಅಡಿಕೆ : ಸೋಮವಾರ, ಬುಧವಾರ, ಶುಕ್ರವಾರ.
ಸಂಪರ್ಕ : ರಾಜೇಶ್ ಎಂ ಮೊ:. 9947680655
ಕಛೇರಿ : 08255 – 239313.

ಸುಳ್ಯ
ಕೊಕ್ಕೊ : ಗುರುವಾರ
ಅಡಿಕೆ : ಸೋಮವಾರ, ಬುಧವಾರ, ಶುಕ್ರವಾರ.
ಸಂಪರ್ಕ : ಶ್ಯಾಮ್ ಮೊ:. 6360053860
ಕಛೇರಿ : 08257 – 230474.

ನಿಂತಿಕಲ್ಲು
ಅಡಿಕೆ ಮಾತ್ರ
ಅಡಿಕೆ : ಸೋಮವಾರ, ಬುಧವಾರ, ಶುಕ್ರವಾರ.
ಸಂಪರ್ಕ : ಶ್ರೀನಿಧಿ : ಮೊ:. 9663715920
ಕಛೇರಿ : 08257 – 275088.
ಸೂಚನೆ : ದಿನಕ್ಕೆ ಗರಿಷ್ಠ 10 ಟೋಕನ್ ಪಡೆಯಲು ಮಾತ್ರ ಅವಕಾಶ.

ಕಡಬ
ಕೊಕ್ಕೊ : ಗುರುವಾರ
ಅಡಿಕೆ : ಸೋಮವಾರ, ಬುಧವಾರ, ಶುಕ್ರವಾರ.
ಸಂಪರ್ಕ : ಮಹೇಶ್ ಚಂದ್ರ ಮೊ:. 9483790435.
ಕಛೇರಿ : 08251 – 260220.

ಆಲಂಕಾರು
ಅಡಿಕೆ ಮಾತ್ರ :
ಅಡಿಕೆ : ಸೋಮವಾರ, ಬುಧವಾರ, ಶುಕ್ರವಾರ.
ಸಂಪರ್ಕ : ಧನುಷ್ ಮೊ:.9972321421.
ಕಛೇರಿ : 08251 – 263483.

ಅಡ್ಯನಡ್ಕ
ಕೊಕ್ಕೊ : ಗುರುವಾರ
ಅಡಿಕೆ : ಸೋಮವಾರ, ಬುಧವಾರ, ಶುಕ್ರವಾರ.
ಸಂಪರ್ಕ : ದಿನೇಶ್ ಕುಮಾರ್ ಮೊ:. 8277355840
ಕಚೇರಿ : 08255 – 295321.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.