ಜೈ ಶ್ರೀರಾಮ್ ಗೆಳೆಯರ ಬಳಗದಿಂದ 30 ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

Advt_NewsUnder_1
Advt_NewsUnder_1
Advt_NewsUnder_1

ಬಂದಾರು: ಕೊರೊನಾ ವೈರಸ್ ಹರಡದಂತೆ ತಡೆಯಲು ಲಾಕ್‍ಡೌನ್ ಘೋಷಿಸಿದ್ದರಿಂದ ಅಗತ್ಯ ಸಾಮಾಗ್ರಿ ಖರೀದಿಗೆ ತೀವ್ರ ಸಂಕಷ್ಟಕ್ಕೆ ಒಳಗಾದ 30 ಕುಟುಂಬಗಳಿಗೆ ಬಂದಾರು ಶ್ರೀರಾಮ ನಗರದ ಜೈ ಶ್ರೀರಾಮ್ ಗೆಳೆಯರ ಬಳಗವು ಅಗತ್ಯ ಸಾಮಾಗ್ರಿಗಳ ಆಹಾರ ಕಿಟ್ ವಿತರಣೆ ಮಾಡಿದೆ. 

ಬಂದಾರು ಗ್ರಾಮದ ಪಾಣೇಕಲ್ಲು ಬೂತ್‍ನ 29 ಕುಟುಂಬಕ್ಕೆ ಹಾಗೂ ಮೈರೋಲ್ಡಡ್ಕ ಬೂತ್‍ನ ಒಂದು ಕುಟುಂಬಕ್ಕೆ ಅಗತ್ಯ ಸಾಮಾಗ್ರಿಗಳ ಆಹಾರ ಕಿಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಬಳಗದ ಸ್ಥಾಪಕ ಅಧ್ಯಕ್ಷರು ಹಾಗೂ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉದಯ ಬಿ.ಕೆ, ಬಳಗ ಅಧ್ಯಕ್ಷರಾದ ಕುಶಾಲಪ್ಪ, ಕಾರ್ಯದರ್ಶಿ ಶ್ರೀಧರ್ ಬಿ.ಕೆ, ಬಳಗದ ಮಾಜಿ ಅಧ್ಯಕ್ಷರುಗಳಾದ ರಾಜಶೇಖರ್ ಬಿ.ಕೆ, ಶಿವರಾಮ್, ಪ್ರಕಾಶ್ ಕೆ, ಸದಸ್ಯರುಗಳಾದ ಲಿಂಗಪ್ಪ, ಚಂದ್ರಹಾಸ ಕುಂಬಾರ, ಕೃಷ್ಣ, ಜಯಂತ್ ಉಪಸ್ಥಿತರಿದ್ದರು. ಈ ಕಾರ್ಯಕ್ಕೆ ಸಹಕರಿಸಿದ ಬಳಗದ ಎಲ್ಲ ಸದಸ್ಯರಿಗೆ ಪಂಚಾಯತಿ ಆಡಳಿತ ವತಿಯಿಂದ ಅಧ್ಯಕ್ಷರಾದ ಉದಯ ಬಿ.ಕೆ ಕೃತಜ್ಞತೆ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.