ಬಳಂಜ ಉಮಾಮಹೇಶ್ವರ ಯುವಕ ಮಂಡಲದಿಂದ 100 ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

ಬಳಂಜ: ಕೊರೊನಾ ವೈರಸ್‍ನಿಂದಾಗಿ ಲಾಕ್‍ಡೌನ್ ಆಗಿರುವುದರಿಂದ ಅಗತ್ಯ ಸಾಮಾಗ್ರಿಗಳ ಖರೀದಿಗೆ ಬಡವರಿಗೆ ಸಮಸ್ಯೆಯಾಗಿದ್ದು ಅದರ ನಿವಾರಣೆಗಾಗಿ ಬಳಂಜ ಶ್ರೀಉಮಾಮಹೇಶ್ವರ ಯುವಕ ಮಂಡಲದ ವತಿಯಿಂದ ಸುಮಾರು 100 ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಯಿತು.

ಬಳಂಜ ಶ್ರೀಪಂಚಲಿಂಗೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಎ.8ರಂದು ಸುಮಾರು 100 ಕುಟುಂಬಗಳ ಬಡವರಿಗೆ ಅಕ್ಕಿ, ಮೆಣಸು, ಉಪ್ಪಿನಕಾಯಿ, ಸಕ್ಕರೆ, ಟೀ ಪುಡಿ ಒಳಗೊಂಡಿರುವ ಆಹಾರ ಸಾಮಾಗ್ರಿಗಳ ಕಿಟ್‍ನ್ನು ದಾನಿಗಳು ವಿತರಿಸಿದರು.
ಕೆಲವು ದಿನಗಳಿಂದ ಅಗತ್ಯ ಸಾಮಾಗ್ರಿಗಳ ಖರೀದಿಗೆ ತೊಂದರೆ ಅನುಭವಿಸುತ್ತಿರುವ ಕುಟುಂಬಗಳನ್ನು ಗುರುತಿಸಿ ದಾನಿಗಳು ನೀಡಿರುವ ದಿನಸಿ ಸಾಮಾಗ್ರಿಗಳನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಶ್ರೀಉಮಾಮಹೇಶ್ವರ ಯುವಕ ಮಂಡಲ ಅಧ್ಯಕ್ಷ ಯೋಗೀಶ್ ಆರ್., ಪ್ರಮುಖರಾದ ಹರೀಶ್ ವೈ, ಜಯ ಪೂಜಾರಿ ನಿಟ್ಟಡ್ಕ, ಸತೀಶ್ ರೈ ಬಾರ್ದಡ್ಕ, ಸದಾನಂದ ಸಾಲ್ಯಾನ್, ಸುನೀಲ್ ಶೆಟ್ಟಿ, ಮಂಜುನಾಥ ಭಟ್, ನಿತ್ಯಾನಂದ ಟೈಲರ್, ಆನಂದ ದೇವಾಡಿಗ, ಕೃಷ್ಣ ದೇವಾಡಿಗ, ರಮೇಶ್ ದೇವಾಡಿಗ ಮುಂತಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.