ಮೊದಲ ಹಂತದ “ಸಪ್ತಪದಿ” ಸರಳ ಸಾಮೂಹಿಕ ವಿವಾಹ ಮುಂದೂಡಿಕೆ ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆದೇಶ

ಬೆಳ್ತಂಗಡಿ: ಕೊರೊನಾ ವೈರಸ್ ಹರಡದಂತೆ ತಡೆಗಟ್ಟುವ ಹಿನ್ನೆಲೆಯಲ್ಲಿ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾದ “ಸಪ್ತಪದಿ” ಸರಳ ಸಾಮೂಹಿಕ ವಿವಾಹವು ಎ.26ರಂದು ನಿಗದಿಯಾಗಿದ್ದ ಮೊದಲನೇ ಹಂತದ ವಿವಾಹವನ್ನು ಮುಂದೂಡಲಾಗಿದೆ ಎಂದು ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆದೇಶದಲ್ಲಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಈ ಬಗ್ಗೆ ಎ.7ರಂದು ಚರ್ಚಿಸಿ ಎ.26ರಂದು ಜರುಗಬೇಕಿದ್ದ ಕಾರ್ಯಕ್ರಮವನ್ನು 2ನೇ ಹಂತದ ಸಾಮೂಹಿಕ ವಿವಾಹ ನಿರ್ಣಯಿಸಿದ ದಿನಾಂಕವಾದ ಮೇ 24ಕ್ಕೆ ಜೋಡಿಸಲು ನಿರ್ಣಯಿಸಿದ್ದು ಈ ಬಗ್ಗೆ ಮುಂದಿನ ದಿನದಲ್ಲಿ ಪರಿಸ್ಥಿತಿ ಅವಲೋಕಿಸಿ ಮುಂದೂಡಿದ ದಿನಾಂಕ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.

ಈ “ಸಪ್ತಪದಿ” ಸರಳ ಸಾಮೂಹಿಕ ವಿವಾಹಕ್ಕೆ ರಾಜ್ಯದಲ್ಲಿ ಇಲಾಖೆಯ ವ್ಯಾಪ್ತಿಗೆ ಬರುವ ಸುಮಾರು 100ಕ್ಕೂ ಹೆಚ್ಚು ಎ ದರ್ಜೆಯ ದೇವಸ್ಥಾನ ಹಾಗೂ ಇತರ ಆಯ್ದ ದೇವಸ್ಥಾನಗಳಿಂದ ಸುಮಾರು 4,500ಕ್ಕೂ ಹೆಚ್ಚು ಮಂದಿ ಫಲಾನುಭವಿಗಳು ಅರ್ಜಿಗಳನ್ನು ಪಡೆದಿದ್ದು, ಸುಮಾರು 2 ಸಾವಿರ ಮಂದಿ ಅಧಿಕೃತ ದಾಖಲೆಗಳೊಂದಿಗೆ ಅರ್ಜಿ ಭರ್ತಿ ಮಾಡಿ ವಾಪಾಸು ಸಲ್ಲಿಸಿದ್ದಾರೆ.

ರಾಜ್ಯಾದ್ಯಂತ ಸಪ್ತಪದಿ ರಥಗಳು ಸಾಮೂಹಿಕ ವಿವಾಹದ ಬಗ್ಗೆ ಪ್ರಚಾರ ನಡೆಸಿದರೆ, 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ವಿಚಾರ ಸಂಕಿರಣಗಳನ್ನು ಏರ್ಪಡಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.