ಕರಾಯ ಪಾಸಿಟಿವ್ ವ್ಯಕ್ತಿಯ ಮನೆಯವರು ರೋಗ ಮುಕ್ತ: ಆಸ್ಪತ್ರೆಯಿಂದ ಬಿಡುಗಡೆ

ಬೆಳ್ತಂಗಡಿ: ಎಲ್ಲೆಡೆ ಕೊರೊನಾ ವ್ಯಾಪಿಸಿದ ಬೆನ್ನಿಗೇ ಬೆಳ್ತಂಗಡಿ ತಾಲೂಕಿನ ಕರಾಯದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಆದ ಘಟನೆಯ ಬಳಿಕ ಅವರ ತಂದೆಯನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರೂ ಸೇರಿದಂತೆ ಅವರ ಮನೆಯಲ್ಲಿ ತಾಯಿಯನ್ನು ಪರೀಕ್ಷೆಗೊಳಪಡಿಸಲಾಗಿತ್ತಾದರೂ ಇಬ್ಬರಿಗೂ ಕೂಡ ನೆಗೆಟಿವ್ ರಿಪೋರ್ಟ್ ಬಂದಿದೆ. ಆ ಹಿನ್ನೆಲೆಯಲ್ಲಿ ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದ ಕೊರೊನಾ ಪೀಡಿತರ ತಂದೆ ನಿನ್ನೆಯೇ ಡಿಸ್ಚಾರ್ಜ್ ಆಗಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ಈ ಸುದ್ದಿಯಿಂದ ಕರಾಯ ಕಾಲನಿಯ ನಿವಾಸಿಗಳು, ಕಳೆದ ಇಷ್ಟೂ ದಿನಗಳಿಂದ ಹೋಮ್ ಕ್ವಾರೆಂಟೈನ್‌ನಲ್ಲಿರುವ ಈ ಭಾಗದ ಎಲ್ಲ ಮನೆಗಳವರಿಗೂ ಹಾಗೂ ಇಡೀ ತಾಲೂಕಿಗೂ ಇದು ಹರ್ಷದ ಸುದ್ದಿಯಾಗಿದೆ.

ವಿದೇಶದಿಂದ ಮರಳಿದ್ದ ಕರಾಯದ ವ್ಯಕ್ತಿ ಅನಾರೋಗ್ಯಕ್ಕೊಳಗಾಗಿ ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಅವರನ್ನು ಪರೀಕ್ಷೆಗೊಳಪಡಿಸಿದಾಗ ಅವರಲ್ಲಿ ರೋಗ ಲಕ್ಷಣಗಳು ದೃಢಪಟ್ಟಿತ್ತು. ಆ ಹಿನ್ನೆಲೆಯಲ್ಲಿ ಅವರನ್ನು ವೆನ್ಲಾಕ್ ಜಿಲ್ಲಾಸ್ಪತ್ರೆಗೆ ವರ್ಗಾಯಿಸಿ ಚಿಕಿತ್ಸೆ ಮುಂದುವರಿಸಲಾಗುತ್ತಿದೆ. ಅಲ್ಲಿ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಅವರ ತಂದೆ, ತಾಯಿ ಅಲ್ಲದೆ, ಪಾಸಿಟಿವ್ ಬಂದಿರುವ ವ್ಯಕ್ತಿ ಎತ್ತಿ ಆಡಿಸಿದ್ದ ಎದುರಿನ ಮನೆಯ ಮಗು ಸಹಿತ ಇತರರ ಪರೀಕ್ಷೆ ನಡೆಸಿದ ವೇಳೆ ಅವರೆಲ್ಲರ ವರದಿಯೂ ನೆಗೆಟಿವ್ ಬಂದಿದೆ. ಘಟನೆಯ ಹಿನ್ನೆಲೆಯಲ್ಲಿ ಇಡೀ ಗ್ರಾಮವನ್ನು ಹೋಮ್ ಕ್ವಾರೆಂಟೈನ್ ಮಾಡಲಾಗಿದ್ದು, ಅವರು 14 ದಿನಗಳ ಅವಧಿ ಈಗಾಗಲೇ ಪೂರ್ತಿಯಾಗಿದೆ.ಹಾಗಿದ್ದೂ ಸರಕಾರದ ಈಗ 28 ದಿನಗಳು ಎಂದು ಬದಲಾದ ನಿಯಮ ಪ್ರಕಟಿಸಿರುವುದರಿಂದ ಮುಂದಿನ ಆದೇಶ ಬರುವವರೆಗೆ ಸದ್ಯದ ಕರಾಯ ಪರಿಸರದ ವಾತಾವರಣ ಹಾಗೆಯೇ ಮುಂದುವರಿಯಲಿದೆ ಎಂದು ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.