ಎಸ್ಸೆಸ್ಸೆಫ್ ಬೆಳಾಲು ಯುನಿಟ್ ವತಿಯಿಂದ ಬಡವರಿಗೆ ದಿನಬಳಕೆ ವಸ್ತು ವಿತರಣೆ

Advt_NewsUnder_1
Advt_NewsUnder_1
Advt_NewsUnder_1

ಉಜಿರೆ : ಕೊರೊನಾ ವೈರಸ್ ಎಂಬ ಮಹಾಮಾರಿಯನ್ನು ತಡೆಗಟ್ಟುವ ಸಲುವಾಗಿ ಇಡೀ ದೇಶವೇ ಲಾಕ್‌ಡೌನ್ ಆಗಿರುವ ಹಿನ್ನೆಲೆಯಲ್ಲಿ ಕೆಲಸವಿಲ್ಲದರಿಂದ ದಿನಗೂಲಿ ನೌಕರರು,ಬಡವರು ದಿನಬಳಕೆಯ ಅಗತ್ಯ ಸಾಮಾಗ್ರಿಗಳನ್ನು ದೈನಂದಿನ ಸಂಪಾದನೆ ಇಲ್ಲದಿರುವುದರಿಂದ ಖರೀದಿಸಲು ಆಗುತ್ತಿಲ್ಲ.ಇದರಿಂದ ಸಂಕಷ್ಟಕ್ಕೆ ಒಳಗಾದ ದಿನಗೂಲಿ ನೌಕರರಾದ ಬಡವರಿಗೆ ಎಸ್ಸೆಸ್ಸೆಫ್ ಬೆಳಾಲು ಯುನಿಟ್ ವತಿಯಿಂದ 30ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಅಕ್ಕಿ ಹಾಗೂ ಅಗತ್ಯ ಸಾಮಾಗ್ರಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಅನ್ಸಾರಿಯಾ ಜುಮಾ ಮಸ್ಜಿದ್ ಬೆಳಾಲು ಇದರ ಅಧ್ಯಕ್ಷ ಆದಂ ಟಿ.ಹೆಚ್, ಪ್ರ.ಕಾರ್ಯದರ್ಶಿ ಹಸೈನಾರ್ ಶಾಂತಿಗುಡ್ಡೆ, ಎಸ್.ವೈ.ಎಸ್ ಬೆಳಾಲು ಬ್ರಾಂಚ್‌ ಕೋಶಾಧಿಕಾರಿ ಉಸ್ಮಾನ್ ಸೊಸೈಟಿ, ಜೊ.ಕಾರ್ಯದರ್ಶಿ ಖಾದರ್ ಮಲ್ಜ‌ಅ್, ಎಸ್ ಎಸ್ ಎಫ್ ಬೆಳಾಲು ಶಾಖಾಧ್ಯಕ್ಷ ಮಹ್‌ರೂಫ್ ಬೆಳಾಲು ಹಾಗೂ ಇಸ್ಮಾಯಿಲ್ ಸ‌ಅದಿ ಹಾಜರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.