ಅಕ್ರಮವಾಗಿ ಶೇಂದಿ ಸಾಗಿಸುತ್ತಿದ್ದ ಇಬ್ಬರ ಬಂಧನ * ಬೆಳ್ತಂಗಡಿ ಅಬಕಾರಿ ಪೊಲೀಸರಿಂದ ಓಮ್ನಿ ಕಾರು, 90ಲೀ. ಶೇಂದಿ ವಶ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಲಾಕ್ ಡೌನ್ , ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ಬಂದ್ ಮಾಡಿದ್ದರೂ ಅಕ್ರಮವಾಗಿ ಶೇಂದಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ.

ಬೆಳ್ತಂಗಡಿ ವಲಯದ ಅಬಕಾರಿ ಪೊಲೀಸರು ಎ.5 ರಂದು ನಡೆಸಿದ ಗಸ್ತಿನ ವೇಳೆ
ಶೇಂದಿ ಮಾರಾಟ ಮಾಡಲು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪಿಗಳಾದ ತಂಬಿ ಕೆ.ವಿ. ಹಾಗೂ ಶಿವಣ್ಣ ಗೌಡರನ್ನು ಬಂಧಿಸಿ ಅವರಿಂದ 35 ಲೀ. ಸಾಮರ್ಥ್ಯದ ಮೂರು ಪ್ಲಾಸ್ಟಿಕ್ ಕ್ಯಾನ್ ಗಳಲ್ಲಿನ 90 ಲೀ. ಶೇಂದಿ ಹಾಗೂ ಸಾಗಾಟಕ್ಕೆ ಬಳಸಿದ ಮಾರುತಿ ಓಮ್ನಿ ಕಾರು ( ಕೆಎ.21.ಪಿ. 3790) ಸೇರಿದಂತೆ ಒಟ್ಟು 1, 17,736 ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಅವರಿಗೆ ನ್ಯಾಯಾಂಗ ಬಂಧನವಾಗಿದೆ.

ಅಬಕಾರಿ ಪೊಲೀಸರ ಈ ಕಾರ್ಯಾಚರಣೆಯಲ್ಲಿ ಜಿಲ್ಲಾ ಅಬಕಾರಿ ಉಪ ಆಯುಕ್ತೆ ಶೈಲಜಾ ಎ.ಕೋಟೆ ಅವರ ನಿರ್ದೇಶನ ಹಾಗೂ ಬಂಟ್ವಾಳ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕಿ ಗೀತಾ ಪಿ. ಅವರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವಲಯದ ಅಬಕಾರಿ ನಿರೀಕ್ಷಕರಾದ ಸೌಮ್ಯಲತಾ ಎನ್. ಹಾಗೂ ಸಿಬ್ಬಂದಿಗಳಾದ ಸಯ್ಯದ್ ಶಬೀರ್, ಭೋಜ.ಕೆ, ಅಬ್ದುಲ್ ಹಮೀದ್, ಶಿವಶಂಕ್ರಪ್ಪ, ರವಿಚಂದ್ರ ಬೂದಿಹಾಳ ಹಾಗೂ ಚಾಲಕ ನವೀನ್ ಕುಮಾರ್ ಇದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.