ಕಕ್ಕಿಂಜೆಯ ಮುಸ್ಲಿಂ ವ್ಯಾಪಾರಿಯಿಂದ ಪರಸ್ತ್ರೀ ಸಂಘ; ಗೂಸಾ ನೀಡಿ ಚಿತ್ರೀಕರಿಸಿದ ವೀಡಿಯೋ ಈಗ ಎಲ್ಲೆಡೆ ವೈರಲ್

 

ಕಕ್ಕಿಂಜೆಯಲ್ಲಿ ಸಣ್ಣ ಉದ್ಯಮಿಯಾಗಿರುವ ವ್ಯಕ್ತಿಯೊಬ್ಬರು ಮಹಿಳೆಯೊಬ್ಬರ ಮನೆಗೆ ತೆರಳಿ ಕಾಮಕೇಳಿಗೆ ಯತ್ನ ನಡೆಸಿ ಬಳಿ ಒದೆ ತಿಂದ ಬಗ್ಗೆ ಇರುವ ವೀಡಿಯೋ ವೊಂದು ಸಾಮಾಜಿಕ ಜಾಲತಾಣದಲ್ಲಿ ಎರಡು ದಿನಗಳಿಂದ ಭಾರೀ ಸದ್ದು ಮಾಡಿದೆ.

ಕಕ್ಕಂಜೆ ಮಸ್ಜಿದ್ ವಾಣಿಜ್ಯ ಸಂಕೀರ್ಣದಲ್ಲಿ ಅಂಗಡಿ ಹೊಂದಿರುವ ಶರೀಫ್ ಅವರು ಕಕ್ಕಿಂಜೆಯ ವೈನ್ ಸ್ಟೋರ್ ಒಂದರ ಮೇಲೆ ಇರುವ ಮನೆಯಲ್ಲಿ ನೆಲೆಸಿರುವ ಮಹಿಳೆಯೊಬ್ಬರ ಮನೆಗೆ ಕಾಮಕೇಳಿಗೆ ಹೋಗಿದ್ದಾಗ ಅಲ್ಲಿ ನಾಲ್ಕೈದು ಮಂದಿ ಅವರನ್ನು ರೆಡ್‌ಹ್ಯಾಂಡಾಗಿ ಹಿಡಿದು ಚೆನ್ನಾಗಿ ತಪರಾಕಿ ನೀಡಿ, ವಿವಸ್ತ್ರಗೊಳಿಸಿದ್ದೂ ಮಾತ್ರವಲ್ಲದೆ ಅವರಿಂದ ಘಟನೆಯ ಬಗ್ಗೆ ವೀಡಿಯೋ ಚಿತ್ರೀಕರಣವನ್ನೂ ನಡೆಸಿ ಬಿಡುಗಡೆಗೊಳಿಸಿದ್ದಾಗಿ ವೀಡಿಯೋ ದಾಖಲೆ ಇದೀಗ ಎಲ್ಲರ ಮೊಬೈಲ್‌ಗಳಲ್ಲಿ ಹರಿದಾಡುತ್ತಿದೆ.
ಒಂಟಿ ಮಹಿಳೆ ಇರುವ ಮನೆಗೆ ಹೋಗಿ ಬಚ್ಚಲು ಮನೆಗೆ ಇಣುಕಿದ ವ್ಯಕ್ತಿಗೆ ಹಲ್ಲೆ ಎಂದೂ, ತನ್ನ ಅಂಗಡಿಗೆ ಬರುತ್ತಿದ್ದ ಯುವತಿಯರಿಗೆ ಅಕ್ಕಿ ನೀಡಿ, ಮನೆ ಕಟ್ಟಿಸಿಕೊಡುವುದಾಗಿ ಆಮಿಷಗಳನ್ನು ಒಡ್ಡಿ ಮತಾಂತರ ಮಾಡಲು ಯತ್ನ ನಡೆಸುತ್ತಿದ್ದ ವ್ಯಕ್ತಿಗೆ ಸಾರ್ವಜನಿಕರು ಚೆನ್ನಾಗಿ ಬುದ್ದಿ ಕಲಿಸಿದ್ದಾರೆ ಎಂಬಿತ್ಯಾಧಿಯಾಗಿ ಕೆಲವೊಂದು ವೆಬ್‌ಸೈಟ್‌ಗಳಲ್ಲಿ ಬೇರೆ ಬೇರೆ ವ್ಯಾಖ್ಯಾನಗಳೊಂದಿಗೆ ನ್ಯೂಸ್‌ಗಳು ಹರಿದಾಡುತ್ತಿದೆ.

ಎರಡು ತಿಂಗಳ ಹಿಂದೆ ನಡೆದ ಘಟನೆ ಈಗ ವೈರಲ್;
ಈ ಘಟನೆ ೨ ತಿಂಗಳ ಹಿಂದೆಯೇ ನಡೆದಿದ್ದು ಇದೀಗ ಸಾಮಾಜಿಕ ಜಾಲತಾಣಗಳ ಮೂಲಕ ಹೊರಪ್ರಪಂಚಕ್ಕೆ ತಿಳಿದಿದೆ ಎಂದು ಹೇಳಲಾಗಿದೆ. ಅನ್ಯ ಮಹಿಳೆ ಜೊತೆ ನಿರಂತರ ಫೋನ್ ಮೂಲಕ ಸಂಪರ್ಕದಲ್ಲಿದ್ದ ಶರೀಫ್‌ನ ವಿಚಾರ ತಿಳಿದು ಶರೀಫ್ ಪತ್ನಿ ಮತ್ತು ಶರೀಫ್ ನಡುವೆ ಮನೆಯಲ್ಲಿ ಜಗಳ ನಡೆದು ಅವರು ತಿಂಗಳ ಹಿಂದೆಯೇ ತವರುಮನೆ ಸೇರಿದ್ದರೆಂದು ತಿಳಿದುಬಂದಿದೆ. ಅಲ್ಲದೆ ತನ್ನ ಸಹೋದರರ ಬಳಿ ದೂರಿಕೊಂಡಂತೆ ಅವರು ಬಾವ ಶರೀಫ್ ಅವರನ್ನು ವಿಚಾರಿಸಿ, ಸೂಕ್ತ ರೀತಿಯಲ್ಲಿ ಶರೀಫ್‌ರಿಗೆ ಬುದ್ದಿಮಾತು ಹೇಳಿದ್ದರೆಂದೂ ಕಕ್ಕಿಂಜೆ ಪರಿಸರದ ಹಲವರಿಗೆ ಈ ವಿಚಾರ ತಿಳಿದಿದೆ ಎನ್ನಲಾಗಿದೆ.

ಎಸ್.ಕೆ.ಎಸ್ಸೆಸ್ಸೆಫ್ ಜವಾಬ್ಧಾರಿಯಿಂದ ಉಚ್ಚಾಟನೆ:
ಈ ಮಧ್ಯೆ ಶರೀಫ್ ಅವರು ಎಸ್‌ಕೆಎಸ್ಸೆಸ್ಸೆಫ್‌ನ ಸಕ್ರೀಯ ಕಾರ್ಯಕರ್ತರಾಗಿದ್ದು ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ, ವಿಖಾಯ ತಂಡದಲ್ಲಿ ಸಂಘಟನೆ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದವರಾಗಿದ್ದರು. ಹೀಗಿರುವಂತೆ ಶರೀಫ್ ಅವರ ಕೌಟುಂಬಿಕ ವಲಯದಲ್ಲಿ ಆಗಿರುವ ಗಲಾಟೆಯ ವಿವರಗಳನ್ನು ಅರಿತ ಸಂಘಟನೆ ಕಳೆದ ಫೆ. ೧೩ ತಾರೀಖಿಗೇ ನೀಡಲಾದ ನೋಟೀಸಿನಂತೆ ಅವರನ್ನು ಎಸ್‌ಕೆಎಸ್ಸೆಸ್ಸೆಫ್‌ನ ಕಕ್ಕಿಂಜೆ ಕ್ಲಸ್ಟರ್ ಸೇರಿದಂತೆ ಜಿಲ್ಲಾ ಸಮಿತಿ ವರೆಗೆ ಅವರಿದ್ದ ಎಲ್ಲ ಹುದ್ದೆಗಳಿಂದ ಅವರನ್ನು ತೆರವು ಗೊಳಿಸಿ ಆದೇಶ ನೀಡಿದೆ. ಈ ಬಗ್ಗೆ ಸಂಘಟನೆ ಕೂಡ ಸಾಮಾಜಿಕ ಜಾಲ ತಾಣದಲ್ಲಿ ತಮ್ಮ ಹೇಳಿಕೆ ನೀಡಿದ್ದು, ಎಸ್‌ಕೆಎಸ್ಸೆಸ್ಸೆಫ್ ಸಂಘಟನೆ ಶರೀಫ್ ವಿರುದ್ಧ ಈಗಾಗಲೇ ಕ್ರಮ ಕೈಗೊಂಡಿದ್ದು ಅವರನ್ನು ಸಂಘಟನೆಯಿಂದ ಉಚ್ಛಾಟಿಸಿದೆ. ಆದ್ದರಿಂದ ಶರೀಫ್ ರಿಗೂ ಸಂಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದೆ.

ಮಸ್ಜಿದ್ ವಾಣಿಜ್ಯ ಮಳಿಗೆಯಿಂದ ಮಳಿಗೆ ತೆರವಿಗೆ ಕ್ರಮ:
ಇನ್ನೊಂದೆಡೆಯಿಂದ ಶರೀಫ್ ಅವರು ಕಕ್ಕಿಂಜೆ ಮಸ್ಜಿದ್ ವಾಣಿಜ್ಯ ಮಳಿಗೆಯಲ್ಲಿ ಹೊಂದಿದ್ದ ಸಿ.ಎಂ ಜನರಲ್ ಸ್ಟೋರ್‍ಸ್ ಅಂಗಡಿಯನ್ನು, ಶರೀಫ್ ಅವರು ಶರಿಯತ್ ವಿರುದ್ಧವಾಗಿ ತೋರಿರುವ ನಡೆತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದರಿಂದ ಇದರಿಂದ ಜಮಾಅತಿನ ಗೌರವಕ್ಕೆ ದಕ್ಕೆ ಉಂಟಾಗಿದೆ ಎಂದು ಕಾರಣ ನೀಡಿ, ಅವರಿಗೆ ವ್ಯಾಪಾರಕ್ಕಾಗಿ ವಹಿಸಿ ಕೊಟ್ಟಿದ್ದ ಅಂಗಡಿಯನ್ನು ಅವರಿಂದ ಹಿಂಪಡೆದಿದೆ ಎಂದು ಪ್ರಕಟಣೆ ಹೊರಡಿಸಿದೆ.

ಸಂಘಟನೆ ಹೆಸರು ಬಳಸಿ ಅಪಪ್ರಚಾರ: ಎಸ್‌ಕೆಎಸ್ಸೆಸ್ಸೆಫ್‌ನಿಂದ ಠಾಣೆಗೆ ದೂರು:
೨ ತಿಂಗಳ ಹಿಂದೆ ನಡೆದ ಶರೀಫ್ ಅವರ ಕುಟುಂಬ ಕಲಹದ ವಿಚಾರವು ಬೀದಿಗೆ ಬಂದು ಗಲಾಟೆ ನಡೆದಿದ್ದು ಈ ವಿಚಾರವಾಗಿ ಮಹಮ್ಮದ್ ಶರೀಫ್ ಅವರ ನಡವಳಿಕೆಯ ಬಗ್ಗೆ ಸಮಾಜದಲ್ಲಿ ಅಪಸ್ವರ ಮತ್ತು ಸಂಘಟನೆಯ ತತ್ವ ಸಿಧ್ಧಾಂತಕ್ಕೆ ವಿರುದ್ಧವಾದ ಚಟುವಟಿಕೆಗಳು ಉಂಟಾದ ಕಾರಣಕ್ಕೆ ಅವರನ್ನು ಸಂಘಟನೆಯಿಂದ ವಜಾಗೊಳಿಸಿದ ಕಳೆದ ತಿಂಗಳು ಫೆ. ೧೩ ರಂದೇ ನಿರ್ಣಯ ಕೈಗೊಂಡು ಅವರಿಗೆ ತಿಳಿಸಿದೆ. ಆದರೂ ಇಗೀದ ಇನ್ನೊಂದು ಮಹಿಳೆ ಜೊತೆ ಅವರ ಅನ್ಯವ್ಯವಹಾರದ ವೀಡಿಯೋ ವೈರಲ್ ಆಗುತ್ತಿರುವ ಮಧ್ಯೆ ಇಲ್ಲಿ ಎಸ್‌ಕೆಎಸ್ಸೆಸ್ಸೆಫ್ ಸಂಘಟನೆಯ ಹೆಸರು ತಳಕು ಹಾಕಿಕೊಂಡು ಕೆಲವರು ಅಪಪ್ರಚಾರ ಮಾಡುತ್ತಿದ್ದು ಇದನ್ನು ಖಂಡಿಸುತ್ತೇವೆ. ಶರೀಫ್ ಅವರಿಗೂ ಸಂಘಟನೆಯಗೂ ಯಾವುದೇ ಸಂಬಂಧವಿಲ್ಲ ಎಂದು ಬಹಿರಂಗ ಹೇಳಿಕೆ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಂಘಟನೆಗೆ ಧಕ್ಕೆ ತರುವ ಪ್ರಯತ್ನ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಪೊಲೀಸ್ ಠಾಣೆಗೆ ದೂರು ನೀಡಿದೆ.

ಸೆಕ್ಸ್‌ಟ್ರಾಪ್ ಎಂಬ ಬಹರವೂ ವೈರಲ್:
ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಸದ್ರಿ ಶರೀಫ್ ಅವರ ಜೊತೆ ವೀಡಿಯೋದಲ್ಲಿರುವ ಮಹಿಳೆ ವೀಡಿಯೋ ಕಾಲ್ ಮೂಲಕ ಸಂಭಾಷಣೆ ನಡೆಸುತ್ತಿರುವ ಸ್ಕ್ರೀನ್‌ಶಾಟ್ ಜಾಲತಾಣಗಳಲ್ಲಿ ಹರಿದಾಡಲು ಆರಂಭಿಸಿದೆ. ಅಲ್ಲದೆ ಆ ಮಹಿಳೆ ಮತ್ತು ಶರೀಫ್ ಅವರು ಆಪ್ತರಾಗಿ ಸಂಭಾಷಣೆ ಮಾಡುತ್ತಿರುವ ಆಡಿಯೋ ಕೂಡಾ ಕೆಲವರ ಮೊಬೈಲ್‌ಗಳಲ್ಲಿ ಹರಿದಾಡಲು ಆರಂಭಿಸಿದೆ.
ವೀಡಿಯೋದಲ್ಲಿರುವ ಮಹಿಳೆಯು ಹಿಂದೆ ಮುಸ್ಲಿಂ ಧರ್ಮದವರೇ ಆಗಿದ್ದು ಸ್ಥಳಿಯ ವ್ಯಕ್ತಿಯೊಬ್ಬರು ಅವರನ್ನು ಪ್ರೇಮದ ಬಲೆಗೆ ಬೀಳಿಸಿ ಮತಾಂತರ ಮಾಡಿ ವಿವಾಹವಾಗಿದ್ದಾರೆಂದೂ, ಆ ವ್ಯಕ್ತಿ ಹಲವು ಬಗೆಯ ಬ್ಲ್ಯಾಕ್ ದಂಧೆಗಳನ್ನು ನಡೆಸುತ್ತಿದ್ದು, ಅವರೇ ಕುಮ್ಮಕ್ಕು ನೀಡಿ ಪತ್ನಿಯ ಮೂಲಕ ಶರೀಫ್ ಅವರನ್ನು ಮನೆಗೆ ಆಹ್ವಾನಿಸಿ ಈ ರೀತಿಯ ಸೆಕ್ಸ್‌ಟ್ರ್ಯಾಪ್‌ಗಳನ್ನು ನಡೆಸಿದ್ದಾರೆ ಎಂದು ಸಾಮಾಜಿಕ ಜಾಲ ತಾಣದ ಮೂಲಕ ಮಹಿಳೆಯ ಸ್ಕ್ರೀನ್ ಶಾಟ್ ಚಿತ್ರದೊಂದಿಗೆ ಬರಹವನ್ನು ತೇಲಿಬಿಟ್ಟಿದ್ದಾರೆ.
ಒಟ್ಟಾರೆಯಾಗಿ ಎರಡು ದಿನಗಳಿಂದ ಇದು ಕಕ್ಕಿಂಜೆ ಪರಿಸರದಲ್ಲಿ ಮಾತ್ರವಲ್ಲದೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸುದ್ದಿಯಾಗಿ ಹಬ್ಬಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.