ಪ್ರಧಾನಿ ಭಿನ್ನಹದಂತೆ ನಾವೆಲ್ಲಾ ನಾಳೆ ರಾತ್ರಿ ದೀಪ ಹಚ್ಚೋಣ; ಧರ್ಮಸ್ಥಳದ ಧರ್ಮಾಧಿಕಾರಿ ಡಾ.‌ ಹೆಗ್ಗಡೆ ಅವರ ಧ್ವನಿ ಸಂದೇಶ ಬಿಡುಗಡೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ನಮ್ಮ ಭಾರತ ದೇಶದ ಪ್ರಜೆಗಳು ನಾವೆಲ್ಲರೂ ಒಗ್ಗಾಟ್ಟಾಗಿದ್ದೇವೆ. ಒಂದಾಗಿದ್ದೇವೆ. ಮತ್ತು ವಿಶ್ವದ ಜತೆಗೆ ನಾವು ಕೈಜೋಡಿಸಿದ್ದೇವೆ.

ಈ ಕೈ ಜೋಡಿಸುವಿಕೆ ಎರಡು ರೀತಿಯಿದೆ. ಒಂದು ಕೊರೊನಾ ವ್ಯಾಧಿ ಇಂದು ವಿಶ್ವದ ಎಲ್ಲಾ ದೇಶಗಳಿಗೂ ಪಸರಿಸಿದೆ. ಹಾಗೇ ಒಂದಾಗಿದ್ದೇವೆ. ಅದರ ವಿರುದ್ದ ಹೋರಾಟ ಮಾಡುವಲ್ಲಿಯೂ ನಾವು ವಿಶೇಷವಾದ ಪ್ರಜ್ಞೆಯನ್ನ, ಏಕತೆಯನ್ನ, ಸಂಘಟನೆಯನ್ನು ತೋರಿಸಿದ್ದೇವೆ.

ಇತ್ತೀಚಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೊಸ ಕರೆಯನ್ನು ಕೊಟ್ಟಿದ್ದಾರೆ. ಯಾರ‍್ಯಾರು ಈ ಕೊರೊನಾ ವಿರುದ್ದ ಹೋರಾಟ ಮಾಡುತ್ತಿದ್ದಾರೆ, ವೈದ್ಯರು, ದಾದಿಯರು ಕಾರ್ಯಕರ್ತರ ಶ್ರಮವನ್ನು ನೆನೆದು ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಅದರ ಜತೆಗೆ ನಾವೂ ನಮ್ಮ ಮನೆಯಲ್ಲಿ ಕುಳಿತಾಗ ಇತರರ ಬಗ್ಗೆಯೂ ಚಿಂತನೆ ಮಾಡಬೇಕು. ನಾವೆಲ್ಲರೂ ಇತರರ ಸಂತೋಷವನ್ನು ಹಂಚಿಕೊಂಡು ತಿನ್ನಬೇಕೇ ಹೊರತು ದುಃಖವನ್ನಲ್ಲ.

ಹಾಗೆಯೇ ಎಲ್ಲರ ಭವಿಷ್ಯವನ್ನು, ನೆಮ್ಮದಿಯನ್ನು ನೋಡಿಕೊಂಡು ನಾವು ಸಂಘಟಿತರಾಗಬೇಕು. ನಾವು ಇನ್ನೊಬ್ಬರ ದುಃಖಕ್ಕೆ ಕಾರಣರಾಗಬಾರದು. ಅದಕ್ಕಾಗಿ ಮತ್ತೊಮ್ಮೆ ನಾವು ಸಂಘಟಿತರಾಗಬೇಕಾಗಿದೆ.
ನಾಳೆ ಭಾನುವಾರ ರಾತ್ರಿ ಒಂಭತ್ತು ಗಂಟೆಗೆ ಇಡೀ ದೇಶದ ಪ್ರಜೆಗಳು ದೀಪವನ್ನು ಆರಿಸಿ ಮನೆಯಲ್ಲಿ ಇರತಕ್ಕಂತಹ ಜ್ಯೋತಿಯನ್ನು ಬೆಳಗಿಸಿ, ತಾವು ಕೂಡಾ ಜ್ಯೋತಿಯ ಜತೆ ಐಕ್ಯವಾಗಬೇಕು. ಎಲ್ಲಾ ಸುಖ ದುಃಖದೊಂದಿಗೆ ಬೆರೆಯಬೇಕು ಎಂದು ಹೇಳಿದ್ದಾರೆ.

“ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ” ಎಂಬ ಮಾತಿನಂತೆ ಯಾವ ಜಾತಿ, ಮತ ಸಂಪ್ರದಾಯ ಇರಲಿ, ಅವ ಚಕ್ರವರ್ತಿಯೇ ಇರಲಿ. ಶ್ರೀ ಸಾಮಾನ್ಯನೇ ಇರಲಿ. ಅವನ ಮನೆಯಲ್ಲಿರುವ ಜ್ಯೋತಿ ಒಂದೇ ಬೆಲೆಯದ್ದಾಗಿರುತ್ತದೆ. ಒಂದೇ ರೀತಿಯ ಪ್ರಕಾಶವನ್ನು ಕೊಡುತ್ತದೆ.

ಅದಕ್ಕಾಗಿ ನಾವು ನಮ್ಮ ಅಂತಸ್ತು ಮತ್ತು ಇತರ ಎಲ್ಲಾ ಪ್ರಾದೇಶಿಕ ವಿಚಾರಗಳನ್ನು ಮರೆತು ನಮ್ಮ ನಮ್ಮ ಮನೆಯಲ್ಲಿ ಜ್ಯೋತಿಯನ್ನು ಹಚ್ಚಿ. ಹೇಗೆ ಸೂರ್ಯನ ಬೆಳಕು ಇದ್ದಾಗ ಜ್ಯೋತಿಗೆ ಬೆಲೆ ಇರುವುದಿಲ್ಲವೋ ರಾತ್ರಿ ಹೊತ್ತಾದಾಗ ಆ ಸಣ್ಣ ಜ್ಯೋತಿ ಹೇಳುತ್ತದೆ, ಸೂರ್ಯ ನೀನು ಇಲ್ಲದಿದ್ದಾಗ ನಾನು ಈ ಕೋಣೆಗೆ ಬೆಳಕನ್ನು ಕೊಡುತ್ತೇನೆ. ಪ್ರಪಂಚಕ್ಕೆ ಕೊಡಲು ನನ್ನಿಂದ ಸಾಧ್ಯವಿಲ್ಲ ಆದರೆ ನಾನು ಇರುವಂತ ಪ್ರದೇಶಕ್ಕೆ ಬೆಳಕನ್ನು ಕೊಡುತ್ತೇನೆ.

ಆದರಿಂದ ನಾವೆಲ್ಲರೂ ಕೂಡಾ ಸಣ್ಣ ಸಣ್ಣ ಜ್ಯೋತಿಗಳು. ಈ ಜ್ಯೋತಿಯನ್ನು ಹಚ್ಚಬೇಕು ಅಂತ ಪ್ರಧಾನಿಗಳು ಹೇಳಿದ್ದಾರೆ. ನಾವು ರಾತ್ರಿ ಹೊತ್ತಿನಲ್ಲಿ ಸಣ್ಣ ಜ್ಯೋತಿ ಹಚ್ಚಿ ಈ ಸಣ್ಣ ಜ್ಯೋತಿ ಇದು ಕೇವಲ ನನ್ನ ಮನೆಯ ಜ್ಯೋತಿ ಆದರೂ ಕೂಡಾ ನನ್ನ ಮನೆಯಲ್ಲಿರುವ ಎಲ್ಲಾ ಕುಟುಂಬದ ಸದಸ್ಯರ ಮನೆಗೆ ಬೆಳಕನ್ನು, ಮನಸ್ಸಿಗೆ ಬೆಳಕನ್ನು ಕೊಟ್ಟರೆ ಇಡೀ ನಮ್ಮ ದೇಶಕ್ಕೆ ಸುಭೀಕ್ಷೆ ಆಗುತ್ತದೆ. ಆ ಮೂಲಕ ವಿಶ್ವಕ್ಕೆ ಸುಭೀಕ್ಷೆ ಆಗುತ್ತದೆ ಎಂಬ ಸಂದೇಶವಾಗುತ್ತದೆ.
ಇದನ್ನು ನೀವೆಲ್ಲರೂ ದಯವಿಟ್ಟು ಪ್ರೀತಿಯಿಂದ ಆಸ್ವಾದಿಸಿ, ಆನಂದಿಸಿ, ಸ್ವೀಕರಿಸಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಧ್ವನಿ‌ಮುದ್ರಿಕೆಯ‌ ಮೂಲಕ ಜನತೆಗೆ ವಿಶೇಷ ಮನವಿ ಮಾಡಿಕೊಂಡಿದ್ದಾರೆ.

ಭಾನುವಾರದಂದು ರಾತ್ರಿ ಒಂಭತ್ತು ಗಂಟೆಗೆ ಒಂಭತ್ತು ನಿಮಿಷಗಳ ಕಾಲ ಎಲ್ಲರೂ ಜ್ಯೋತಿ ಹಚ್ಚಿ ಶುಭವನ್ನು ಹಾರೈಸಿ. ಮನಸ್ಸಿನ ಕತ್ತಲೆಯನ್ನು ಓಡಿಸಿ, ದೇಶದಿಂದ ಈ ಕ್ರೂರವಾದಂತಹ ಕೊರೊನಾ ರಾಕ್ಷಸನನ್ನು ಓಡಿಸಿ ಎಂಬ ಸಂದೇಶವನ್ನು ಕೊಡುತ್ತೇನೆ.

ನಾವು ಕೂಡಾ ಧರ್ಮಸ್ಥಳ ದೇವಸ್ಥಾನದಲ್ಲಿ ರಾತ್ರಿ ಒಂಭತ್ತಕ್ಕೆ ಈ ಜ್ಯೋತಿಯನ್ನು ಹಚ್ಚುತ್ತೇವೆ. ಇದರ ಫಲವಾಗಿ ನಮ್ಮ ನಾಡಿಗೆ, ರಾಷ್ಟ್ರಕ್ಕೆ, ವಿಶ್ವಕ್ಕೆ ಶುಭವಾಗಲಿ ಎಂದು ಹಾರೈಸುತ್ತೇನೆ ಎಂದು ಹೇಳಿದ್ದಾರೆ

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.