ವೇಣೂರಿನ ಗಾಂಧಿನಗರ ಪಡಿತರ ಕೇಂದ್ರದಲ್ಲಿ ಸಾಮಾಜಿಕ ಅಂತರ ಕಾಪಾಡದ ಗ್ರಾಹಕರು

 200ಕ್ಕೂ ಅಧಿಕ ಮಂದಿಗೆ ಸಾಮಾಜಿಕ ಅಂತರ ಕಾಪಾಡಲು ಸೂಚಿಸಿದ ಪೊಲೀಸರು

ವೇಣೂರು: ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಪಡಿತರ ವಿತರಣೆ ಕೇಂದ್ರಗಳಲ್ಲಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಿದ್ದರೂ ವೇಣೂರಿನ ಕರಿಮಣೇಲು ಗ್ರಾಮದ ಗಾಂಧಿನಗರದಲ್ಲಿ ಪಡಿತರ ಸಾಮಾಗ್ರಿ ಪಡೆಯಲು 200ಕ್ಕೂ ಅಧಿಕ ಮಂದಿ ಗುಂಪುಗೂಡಿದ್ದರು. ಈ ವಿಷಯ ತಿಳಿದ ಸ್ಥಳಕ್ಕಾಗಮಿಸಿದ  ಪೊಲೀಸರು ಸಾಮಾಜಿಕ ಅಂತರ ಕಾಪಾಡುವಂತೆ ಮಾಡಲು ಹರಸಾಹಸ ಪಡಬೇಕಾಯಿತು.

ಕೋವಿಡ್ 19 ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್‍ಡೌನ್ ಘೋಷಿಸಿದ್ದರ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಡಳಿತವು ಎ.14ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದ್ದರೂ ಯಾವುದೇ ಮುಂಜಾಗ್ರತೆ ಹಾಗೂ ಪೂರ್ವಸಿದ್ಧತೆ ಇಲ್ಲದೆ ಗಾಂಧಿನಗರದ ರಾಜ್ಯ ಹೆದ್ದಾರಿ ಬದಿಯಲ್ಲಿ 200ಕ್ಕೂ ಅಧಿಕ ಮಂದಿಗೆ ಏಕಕಾಲದಲ್ಲಿ ಪಡಿತರ ವಿತರಣೆ ಮಾಡಲಾಗುತ್ತಿತ್ತು.

ಪಡಿತರ ಖರೀದಿಗೆ ಟೋಕನ್ ಪಡೆಯಲು ಜನ ಗುಂಪುಗೂಡಿ ಸಾಮಾಜಿಕ ಅಂತರದ ಸೂಚನೆಯನ್ನು ಉಲ್ಲಂಘಿಸಿದ್ದರು.
ಮಾಹಿತಿ ಪಡೆದ ವೇಣೂರು ಠಾಣೆ ಪೆÇಲೀಸ್ ಉಪ ನಿರೀಕ್ಷಕರಾದ ಲೋಲಾಕ್ಷ ಕೆ. ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿ ಗುಂಪು ಗೂಡಿದವರನ್ನು ಚದುರಿಸಿ ಸರತಿ ಸಾಲು ಮಾಡಲು ಹರಸಾಹಸ ಪಟ್ಟರು. ಈ ರೀತಿ ನೂರಾರು ಮಂದಿ ಗುಂಪು ಕಟ್ಟುವುದನ್ನು ನಿಯಂತ್ರಿಸಲು ಒಂದೇ ಗ್ರಾಮದಲ್ಲಿ ಕನಿಷ್ಟ ಎರಡೆರಡು ದಿನ ಪಡಿತರ ವಿತರಣೆಗೆ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಸಾರ್ವಜನಿಕರಿಂದ ಕೇಳಿ ಬಂದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.