ಸಹಕಾರಿ ಸಂಘದ ಸಿಬ್ಬಂದಿ ಪೊಲೀಸ್ ತಡೆದ ವಿಚಾರ: ಅಧಿಕಾರಿಗಳ ಸಮ್ಮುಖ ಮಾತುಕತೆಯಲ್ಲಿ ಇತ್ಯರ್ಥ

ಮಡಂತ್ಯಾರು ಸಹಕಾರಿ ಸಂಘದ ಸಿಬ್ಬಂದಿಯೊಬ್ಬರು ನಿನ್ನೆ ಕರ್ತವ್ಯ ಮುಗಿಸಿ ಮರಳುತ್ತಿದ್ದ ವೇಳೆ ಅವರ ಮೇಲೆ ಪುಂಜಾಲಕಟ್ಟೆ ಪೊಲೀಸ್ ಸಿಬ್ಬಂದಿಯೊಬ್ಬರು ಹೆಲ್ಲೆ ನಡೆಸಿದ್ದಾರೆಂಬ ಪ್ರಕರಣ ಇಂದು ಅಧಿಕಾರಿಗಳ ಸಮ್ಮುಖ ನಡೆದ ಮಾತುಕತೆಯ ವೇಳೆ ಸುಖಾಂತ್ಯ ಕಂಡಿದೆ. 

ಸಿಬ್ಬಂದಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ತಡೆದ ಪೊಲೀಸ್ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದ ಪಡಿತರ ಯೂನಿಯನ್ ಸಿಬ್ಬಂದಿಗಳು ಇಂದು ತಾಲೂಕಿನೆಲ್ಲೆಡೆ ರೇಷನ್ ವಿತರಣೆ ನಡೆಸುವುದಿಲ್ಲ ಎಂದು ಬೆದರಿಕೆಯೊಡ್ಡಿದ್ದರು. ಸದ್ರಿ ವಿಚಾರವಾಗಿ ಇಂದು ತಹಶಿಲ್ದಾರ್ ಗಣಪತಿ ಶಾಸ್ತ್ರಿ, ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಕುಮಾರ್ ಪಿ.ಜಿ, ಸಬ್ಸ್‌ಇನ್ಸ್‌ಪೆಕ್ಟರ್ ಸೌಮ್ಯಾ ಹಾಗೂ ಇತರ ಅಧಿಕಾರಿಗಳು, ಸಹಕಾರಿ ಸಂಘದ ಆಡಳಿತ ಮಂಡಳಿಯವರು ಜೊತೆಯಾಗಿ ಮಾತುಕತೆ ನಡೆಸಿ ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದಾರೆ.

ಈ ವೇಳೆ ಪೊಲೀಸ್ ಸಿಬ್ಬಂದಿಯನ್ನು ವಿಚಾರಿಸಿದಾಗ, ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸದೇ ಬರುತ್ತಿದ್ದ ವ್ಯಕ್ತಿಯನ್ನು ನಿಲ್ಲಿಸಿ ಪ್ರಶ್ನಿಸಲಾಗಿತ್ತು. ಆ ಬಳಿಕ ಅವರು ಸಿಬ್ಬಂದಿ ಕಾರ್ಡ್ ತೋರಿಸಿದರು. ಮೋಟಾರು ಕಾಯ್ದೆ ಉಲ್ಲಂಘಿಸಿದ ಬಗ್ಗೆ ಕ್ರಮ ಕೈಗೊಳ್ಳಲಾಗಿತ್ತು ಎಂದು ಮೇಲಧಿಕಾರಿಗಳಿಗೆ ವಿವರಣೆ ನೀಡಿದರು.

ಸಭೆಯ ಬಳಿಕ ಮಾತನಾಡಿದ ಅಧಿಕಾರಿಗಳು, ಯಾರೇ ಆದರೂ ಹೆಲ್ಮೆಟ್, ಸೀಟ್ ಬೆಲ್ಟ್, ದಾಖಲೆ ಪತ್ರಗಳು ಹೊಂದಿದ್ದು ಮೋಟಾರು ಕಾಯ್ದೆ ಪಾಲಿಸಬೇಕು. ಕೊರೊನಾ ಕರ್ತವ್ಯಕ್ಕಾಗಿ ವಿಶೇಷ ಪಾಸ್ ಹೊಂದಿದ್ದವರಾದರೆ ಅದನ್ನು ಕಿಸಿಯಲ್ಲಿ ಗುಪ್ತವಾಗಿಟ್ಟುಕೊಳ್ಳದೆ ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಬೇಕು ಎಂದು ಸೂಚನೆ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.