ಅಳದಂಗಡಿ ಗ್ರಾ.ಪಂ.: ಗ್ರಾಹಕರಿಂದ ಸಾಮಾಜಿಕ ಅಂತರ ಕಾಯ್ದು ಪಡಿತರ ಖರೀದಿ

ಅಳದಂಗಡಿ: ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಪಡಿತರ ವಿತರಣೆಯಲ್ಲಿ ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯು ಕ್ರಮ ಕೈಗೊಂಡಿದೆ. 

ಪಡಿತರ ಅಕ್ಕಿ ವಿತರಣೆಯು ಅಳದಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಎ.3ರಂದು ಕುದ್ಯಾಡಿ ಮುದ್ರಾಜೆ ಶಿವನಾಗ ಬಳಿಯಿಂದ ಆರಂಭವಾಗಿ ನಾವರ ರಾಜಾಪಾದೆ ನಾವರ ದೇವಸ್ಥಾನದ ಬಳಿಯಲ್ಲಿ ಪೆರಡಾಲು ಪ್ರದೇಶಗಳಲ್ಲಿ ಪಡಿತರ ಖರೀದಿಗೆ ಬರುವ ಗ್ರಾಹಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು 1 ಮೀಟರ್ ಅಂತರ ಕಾಯಲು ಸುಣ್ಣದಿಂದ ಮಾರ್ಕಿಂಗ್ ಮಾಡಿ ಗ್ರಾಹಕರು ಸರದಿಯಲ್ಲಿ ಬಂದು ಪಡಿತರ ಪಡೆದರು.


ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶಿವಭಟ್ ಕಟ್ಟೂರು, ಉಪಾಧ್ಯಕ್ಷರಾದ ಸದಾನಂದ ಪೂಜಾರಿ ಉಂಗಿಲಬೈಲ್, ನಿರ್ದೇಶಕರಾದ ಪ್ರಶಾಂತ್ ಶೆಟ್ಟಿ ಬೊಳ್ಳಿಮಾರ್, ಕೆಂಪರವರು, ಗ್ರಾಮ ಪಂಚಾಯತ್ ಸದಸ್ಯರಾದ ರವಿ ಪೂಜಾರಿ ಹಾರಡ್ಡೆ, ದಿನೇಶ್ ಕುದ್ಯಾಡಿ, ಪತ್ರಕರ್ತರು ವಿಜಯ ಕುಮಾರ್ ನಾವರ ಶಿಶುಪಾಲ್ ಕುದ್ಯಾಡಿ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮೀರಾ ನಿತ್ಯಾನಂದ ಶೆಟ್ಟಿ ಉಪಸ್ಥಿತರಿದ್ದರು

ಸುಲ್ಕೇರಿಮೊಗ್ರು ಪಡಿತರ ವಿತರಣೆ:
ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸೇವಾ ಸಂಘದ ಆಡಳಿತ ಮಂಡಳಿಯ ತೀರ್ಮಾನದಂತೆ ಸುಲ್ಕೇರಿಮೊಗ್ರು ಮಾಳಿಗೆ ಎಂಬಲ್ಲಿ ಗ್ರಾಮಸ್ಥರಿಗೆ ಎ.4 ರಂದು ಪಡಿತರ ವಿತರಿಸಲಾಯಿತು..
ಈ ಸಂದರ್ಭದಲ್ಲಿ ಅಳದಂಗಡಿ ಸಹಕಾರಿ ಸಂಘದ ಉಪಾಧ್ಯಕ್ಷ ಸದಾನಂದ ಪೂಜಾರಿ ಉಂಗೀಲಬೈಲು, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸತೀಶ್, ಸದಸ್ಯೆ ಸರಸ್ವತಿ, ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.