ಅಗತ್ಯ ಸಾಮಾಗ್ರಿಗಳ ಪೂರೈಕೆಗಾಗಿ ನೇಮಿಸಿದ್ದ ಸ್ವಯಂಸೇವಕರ ನೇಮಕಾತಿ ರದ್ದು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕರಾಯ -ತಣ್ಣೀರುಪಂತ ಗ್ರಾಮದ 10 ಸ್ವಯಂಸೇವಕರ ಹೊರತುಪಡಿಸಿ ಉಳಿದವರ ನೇಮಕಾತಿ ರದ್ದು ಮಾಡಲು ತಹಶೀಲ್ದಾರ್ ಆದೇಶ

ಬೆಳ್ತಂಗಡಿ: ಕೊರೊನಾ ವೈರಸ್ (ಕೋವಿಡ್-19) ಹರಡದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ದಿನಸಿ ಸೇರಿದಂತೆ ಅಗತ್ಯ ಸಾಮಾಗ್ರಿಗಳನ್ನು ಸಾರ್ವಜನಿಕರಿಗೆ ಪೂರೈಸಲು ನೇಮಿಸಿದ್ದ ಸ್ವಯಂ ಸೇವಕರ ನೇಮಕಾತಿಯನ್ನು ತಹಶೀಲ್ದಾರ್ ರದ್ದುಪಡಿಸಿದ್ದಾರೆ.

ಈ ಕುರಿತಂತೆ ಎ.3ರಂದು ತಹಶೀಲ್ದಾರ್ ಗಣಪತಿ ಶಾಸ್ತ್ರಿ ಅವರು ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕ ಹಿತದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೂಲಕ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅಗತ್ಯ ವಸ್ತುಗಳ ಪೂರೈಕೆಗೆ 100 ಮನೆಗಳಿಗೆ ಒಬ್ಬರಂತೆ ಸ್ವಯಂ ಸೇವಕರನ್ನು ಗುರುತಿಸಿ ಸೇವೆಗೆ ಬಳಸಿಕೊಳ್ಳಲಾಗಿತ್ತು.


ಆದರೆ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅವರು ಎ.14ರವರೆಗೆ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಸಾರ್ವಜನಿಕರಿಗೆ ದಿನಸಿ, ತರಕಾರಿ ಸೇರಿದಂತೆ ಅಗತ್ಯ ಸಾಮಾಗ್ರಿಗಳನ್ನು ಖರೀದಿಸಲು ಕಾಲಾವಧಿ ನಿಗದಿ (ಬೆಳಗ್ಗೆ 7ರಿಂದ12)ಮಾಡಿರುವುದರಿಂದ ಅಗತ್ಯ ವಸ್ತುಗಳ ಪೂರೈಕೆಗೆ ಸ್ವಯಂ ಸೇವಕರ ಅವಶ್ಯಕತೆ ಇರುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಆದೇಶವು ಕೊರೊನಾ ಪೀಡಿತ ಪ್ರದೇಶವಾದ ಕರಾಯ -ತಣ್ಣೀರುಪಂತ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 10 ಸ್ವಯಂ ಸೇವಕರ ಸೇವೆಯ ಹೊರತುಪಡಿಸಿ ಇನ್ನುಳಿದ ಎಲ್ಲ ನ.ಪಂ, ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಯಂ ಸೇವಕರ ನೇಮಕ ರದ್ದು ಪಡಿಸಲಾಗಿದೆ.

ಸ್ವಯಂ ಸೇವಕರ ನೇಮಕಾತಿ ರದ್ದು ಮಾಡಿದ್ದೇಕೆ?
1. ಸಾರ್ವಜನಿಕರಿಗೆ ದಿನಸಿ, ತರಕಾರಿ ಸೇರಿದಂತೆ ಅಗತ್ಯ ಸಾಮಾಗ್ರಿಗಳನ್ನು ಖರೀದಿಸಲು ಕಾಲಾವಧಿ ನಿಗದಿ ಮಾಡಿದ್ದರಿಂದ ಸಾಮಾಗ್ರಿ ವಿತರಿಸಲು ಸ್ವಯಂಸೇವಕರ ಅಗತ್ಯವಿಲ್ಲದಾಗಿದೆ.
2. ನಗರ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್‍ಗಳಿಂದ ಗುರುತಿಸಿ ನೇಮಿಸಲಾಗಿರುವ ಸ್ವಯಂ ಸೇವಕರು ಗುರುತಿನ ಚೀಟಿ ದುರುಪಯೋಗವಾಗುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಅವರ ನಿಯೋಜನೆ ರದ್ದಾಗಿದೆ.
3. ಕರಾಯ -ತಣ್ಣೀರುಪಂತ ಗ್ರಾ.ಪಂ. ವ್ಯಾಪ್ತಿಯ ಸ್ವಯಂ ಸೇವಕರ ಹೊರತುಪಡಿಸಿ ಇತರ ಎಲ್ಲ ಸ್ವಯಂ ಸೇವಕರು ಗುರುತಿನ ಚೀಟಿ ತೋರಿಸಿ ಸಂಚರಿಸುವ ಖಾಸಗಿ ವಾಹನಗಳ ಸಂಚಾರ ನಿಯಂತ್ರಿಸುವುದು

 

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.