ವಾಹನ ಸವಾರರೇ ಎಚ್ಚರ !ಅನಗತ್ಯ ಸಂಚರಿಸಿದರೆ ಬೀಳುತ್ತೆ ದಂಡ ಬೆಳ್ತಂಗಡಿಯಲ್ಲಿ 35 ವಾಹನಗಳಿಂದ ದಂಡ ವಸೂಲಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್, ನಿಷೇಧಾಜ್ಞೆ ಆದೇಶ ಮಾತ್ರವಲ್ಲದೇ ಮಧ್ಯಾಹ್ನ ನಂತರ ಸಂಪೂರ್ಣ ಬಂದ್ ಗೆ ಜಿಲ್ಲಾಡಳಿತ ಸೂಚಿಸಿದ್ದರೂ ಕೆಲವರು ಅನಗತ್ಯವಾಗಿ ವಾಹನದಲ್ಲಿ ಸಂಚರಿಸುತ್ತದ್ದವರಿಗೆ ಪೊಲೀಸರು ಬಿಸಿ ಮುಟ್ಟಿಸಿ ದಂಡ ವಸೂಲಿ ಮಾಡಿದ್ದಾರೆ.

ಅನಗತ್ಯವಾಗಿ ವಾಹನದಲ್ಲಿ ಸಂಚರಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಹೇಳಿದ್ದರಿಂದ ಬೆಳ್ತಂಗಡಿ ತಾಲೂಕಿನಲ್ಲಿ ಒಟ್ಟು 35 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ಬೆಳ್ತಂಗಡಿಯಲ್ಲಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಹಾಗೂ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಎಸ್‌.ಐ ನಂದಕುಮಾರ್ ಎಂ.ಎಂ., ಪುಂಜಾಲಕಟ್ಟೆ ಎಸ್‌ಐ ಸೌಮ್ಯಾ, ಧರ್ಮಸ್ಥಳ ಠಾಣೆ ಎಸ್‌ಐ ಓಡಿಯಪ್ಪ, ಸಂಚಾರಿ ಠಾಣೆ ಎಸ್‌ಐ ಪವನ್ ಕುಮಾರ್ ಹಾಗೂ ವೇಣೂರು ಎಸ್‌ಐ ಲೋಲಾಕ್ಷ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆಗಿಳಿದರು.
ವಶ ಪಡಿಸಿಕೊಂಡಿರುವ 35 ವಾಹನಗಳಿಂದ ಸುಮಾರು 28,500 ರೂ. ವರೆಗೆ ದಂಡ ವಸೂಲಿ ಮಾಡಲಾಗಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.