ನಾವೂರು ಗ್ರಾ.ಪಂ.: ಕೊರೊನಾ ನಿಗ್ರಹ ಸೈನಿಕರ ತಂಡ ರಚನೆ ಗ್ರಾಮದ ಜನರ ತುರ್ತು ಅಗತ್ಯಗಳಿಗೆ ಈ ತಂಡ ಸಹಾಯಕ

ನಾವೂರು: ಭಾರತ ಸೇರಿದಂತೆ ವಿಶ್ವವನ್ನೇ ತಲ್ಲಣಗೊಳಿಸುತ್ತಿರುವ ಈ ಕೊರೊನಾ ವೈರಸ್ ನಿಗ್ರಹಿಸಲು ಕೇಂದ್ರ, ರಾಜ್ಯ ಸರಕಾರಗಳು ಹಲವು ಯೋಜನೆಗಳನ್ನು ಘೋಷಿಸಿದೆ. ಅದೇ ರೀತಿ ಈ ಕೊರೊನಾ ವೈರಸ್ ಗ್ರಾಮಗಳಿಗೆ ಹರಡದಂತೆ ತಡೆಯಲು ಕೆಲವು ಸಂಘಟನೆಗಳು ಮುಂದಾಗಿವೆ.
ಕೊರೊನಾ ಸಮಸ್ಯೆಗೆ ಸ್ಪಂದಿಸಲು ಪ್ರತಿ ಗ್ರಾಮ ಪಂಚಾಯತ್‍ನಲ್ಲಿ ಕಾರ್ಯಪಡೆ ರಚಿಸಲಾಗಿದೆ. ಆದರೆ ನಾವೂರು ಗ್ರಾಮ ಪಂಚಾಯತ್‍ನಲ್ಲಿ ಕೊರೊನಾ ವಿರುದ್ಧ ಹೋರಾಡಲು ಎ.3ರಂದು ವಿಭಿನ್ನವಾಗಿ ‘ಕೊರೊನಾ ನಿಗ್ರಹ ಸೈನಿಕರು’ಎಂಬ ತಂಡದ ಕಾರ್ಯಗಳಿಗೆ ಚಾಲನೆ ನೀಡಲಾಯಿತು.


ಕೊರೊನಾ ನಿಗ್ರಹ ಸೈನಿಕರ ಕಾರ್ಯವೇನು?:
ಈ ಕೊರೊನಾ ನಿಗ್ರಹ ಸೈನಿಕರ ತಂಡದ ಪ್ರತಿಯೊಬ್ಬರಿಗೆ ಟೀ ಶರ್ಟ್, ಗುರುತಿನ ಚೀಟಿ ನೀಡಲಾಗಿದ್ದು, ಅವರು ನಾವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಕ್ಕೆ ಹೊರಗಿನಿಂದ ಯಾವುದೇ ವಾಹನಗಳು ಬರದಂತೆ ನಿರ್ಬಂಧಿಸುವುದು ಹಾಗೂ ಗ್ರಾಮದ ಜನರಿಗೆ ಶೀತ,ಕೆಮ್ಮು, ಜ್ವರದಂತಹ ತುರ್ತು ಆರೋಗ್ಯ ಸೇವೆಗಳನ್ನು ಒದಗಿಸಲು ಸಹಾಯಕ್ಕೆ ಮುಂದಾಗುವುದು. ಗ್ರಾಮದ ಜನರಿಗೆ ದಿನಸಿ ಸಾಮಾಗ್ರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಸಲು ಸಹಕರಿಸುವುದು ಇವರ ಕೆಲಸವಾಗಿದೆ.


ನಾವೂರು ಗ್ರಾ.ಪಂ. ಪಿಡಿಒ ಜಯಕೀರ್ತಿ ಈ ತಂಡಕ್ಕೆ ಸೂಕ್ತ ಸಲಹೆ, ಮಾಹಿತಿಯನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಸದಸ್ಯೆ ವೇದಾವತಿ, ನಾವೂರು ಗ್ರಾ.ಪಂ. ಅಧ್ಯಕ್ಷೆ ಲಲಿತಾ, ಉಪಾಧ್ಯಾಕ್ಷ ಗಣೇಶ್, ಸದಸ್ಯರಾದ ಹರೀಶ್ ಸಾಲ್ಯಾನ್ ಮುಂತಾದವರು ಇದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.