ವೈದ್ಯೆಯಿಂದ ಚಿತ್ರದ ಮೂಲಕ ಕೊರೊನಾ’ ಜಾಗೃತಿ ಕಾರ್ಯ

ವೈದ್ಯರು ಸಾಮಾನ್ಯವಾಗಿ ಸ್ಟೆಥಸ್ಕೋಪ್‌ ಹಿಡಿದುಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡುವುದಲ್ಲೇ ಮಗ್ನವಾಗಿರುತ್ತಾರೆ. ತಾವಾಯಿತು ತಮ್ಮ ಕೆಲಸವಾಯಿತು ಎಂದುಕೊಳ್ಳುವವರೇ ಹೆಚ್ಚು. ಇಂಥವರ ಮಧ್ಯೆ ನಾರಾವಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದೀಕ್ಷಿತಾ ಯೋಗೀಶ್‌ ಅವರು ತಾವೇ ಬಿಡಿಸಿದ ಚಿತ್ರದ ಮೂಲಕ ಜನರಲ್ಲಿ ‘ಕೊರೊನಾ’ ಜಾಗೃತಿ ಮೂಡಿಸುತ್ತಿದ್ದಾರೆ.

ಇದೀಗ ಎಲ್ಲೆಲ್ಲೂ ಕೊರೊನಾ ವೈರಸ್‌ನದ್ದೆ ಮಾತು. ದಿನದಿಂದ ದಿನಕ್ಕೆ ಸೋಂಕಿಗೆ ತುತ್ತಾಗುವವರ ಸಂಖ್ಯೆ ಹೆಚ್ಚಾಗುತ್ತೇ ಇದೆ. ಲಾಕ್‌ಡೌನ್‌ ಆದೇಶ ಇರುವುದರಿಂದ ಎಲ್ಲರೂ ಮನೆಯಲ್ಲಿ ಇರುವಂತೆ ಸೂಚಿಸಲಾಗಿದೆ. ಆದರೆ, ಹಿರಿಯ ಅಧಿಕಾರಿಗಳು, ವೈದ್ಯರು, ಶುಶ್ರೂಷಕರು, ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಪೊಲೀಸರು, ಪತ್ರಕರ್ತರು ಎಷ್ಟೇ ರಿಸ್ಕ್‌ ಇದ್ದರೂ ತಮ್ಮ ಕರ್ತವ್ಯವನ್ನು ಮಾಡಲೇಬೇಕಿದೆ. ಇವರೆಲ್ಲರೂ ಸಮಾಜದ ಮಧ್ಯೆ ಕೆಲಸ ಮಾಡುವುದರಿಂದ ಮಾಸ್ಕ್‌ ಧರಿಸಿಕೊಂಡೇ ಕೆಲಸ ಮಾಡುವುದು ಸೂಕ್ತ ಎಂಬುದನ್ನು ಡಾ.ದೀಕ್ಷಿತಾ ಅವರು ಚಿತ್ರದ ಮೂಲಕ ಆಶಯ ವ್ಯಕ್ತಪಡಿಸುತ್ತಾರೆ. ಅಲ್ಲದೆ, ವಿದೇಶಿ ಯಾತ್ರಿಕರು, ಕೋವಿಡ್‌ ರೋಗಿಗಳು, ಕ್ವಾರಂಟೈನ್‌ನಲ್ಲಿ ಇರುವವರು ಕೂಡ ಯಾವ ರೀತಿ ಇರಬೇಕು ಎಂಬುದನ್ನು ಕೂಡ ಚಿತ್ರದ ಮೂಲಕ ತಿಳಿಸಲು ಪ್ರಯತ್ನಿಸಿದ್ದಾರೆ. ಈ ವೈದ್ಯೆಯ ಆರೋಗ್ಯ ಕಾಳಜಿಗೆ ಇದೀಗ ಎಲ್ಲೆಡೆ ಮೆಚ್ಚುಗೆಯ ಮಾತು ವ್ಯಕ್ತವಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.