ನಾರಾವಿಯಲ್ಲಿ ಇಂದು ಕೂಡ ಉತ್ತಮ ಮಳೆ ವರ್ಷಧಾರೆಗೆ ಪುಳಕಿತರಾದ ಜನರು

ನಾರಾವಿ: ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ಗುರುವಾರದಂತೆ ಇಂದು ಕೂಡ ಈ ಬೇಸಿಗೆ ಕಾಲದಲ್ಲಿ ಭಾರಿ ಮಳೆ ಸುರಿದು ಇಳೆಯನ್ನು ತಂಪುಗೊಳಿಸಿದೆ.


ನಾರಾವಿ ಪರಿಸರದಲ್ಲಿ ಬೆಳಗ್ಗೆಯಿಂದ ಬಿಸಿಲಿನ ಬೇಗೆಗೆ ತತ್ತರಿಸಿದ್ದ ಜನರಿಗೆ ಶುಕ್ರವಾರವೂ(ಎ.3) ಮಳೆ ಸುರಿದು ತಂಪಾದ್ದರಿಂದ ಜನರು ಖುಷಿಪಟ್ಟರು. ಬೆಳಗ್ಗೆ ಯಿಂದ ಮಧ್ಯಾಹ್ನವರೆಗೆ ಭಾರಿ ಬಿಸಿಲಿನ ತಾಪಮಾನವಿತ್ತು. ಅಪರಾಹ್ನ ಮೋಡ ಕವಿದು 3.30ರ ಸುಮಾರಿಗೆ ಉತ್ತಮ ಮಳೆ ಸುರಿದು ಈ ಪ್ರದೇಶದ ಜನರು ಹಾಗೂ ಭೂಮಿಗೆ ತಂಪನ್ನು ಉಂಟು ಮಾಡಿತು. ಈ ಪರಿಸರದಲ್ಲಿ ಅಪರಾಹ್ನ 3.30ಕ್ಕೆ ಆರಂಭವಾದ ಮಳೆಯು 1ಗಂಟೆಗೂ ಹೆಚ್ಚು ಕಾಲ ಬಿಟ್ಟು ಬಿಡದೇ ಮಳೆ ಸುರಿದಿದೆ.

ನಾರಾವಿ ಪ್ರದೇಶದಲ್ಲಿ ಗುರುವಾರವೂ ಭಾರಿ ಮಳೆಯಾಗಿ ವಾತಾವರಣ ಹಾಗೂ ಭೂಮಿಯನ್ನು ತಂಪುಗೊಳಿಸಿತ್ತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.