ಸಂಚಾರಿ ಪೊಲೀಸರಿಗೆ ರೋಟರಿ ಕ್ಲಬ್‍ನಿಂದ ಮಾಸ್ಕ್ ಗಳ ವಿತರಣೆ

ಬೆಳ್ತಂಗಡಿ: ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ರೋಟರಿ ಕ್ಲಬ್ ವತಿಯಿಂದ ಬೆಳ್ತಂಗಡಿಯ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿಗೆ ಮಾಸ್ಕ್(ಮುಖಗವಸು)ಗಳನ್ನು ವಿತರಿಸಲಾಯಿತು. 

ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮಕೈಗೊಳ್ಳುವ ಸಂಚಾರಿ ಪೊಲೀಸರು ದಿನನಿತ್ಯ ರಸ್ತೆಗಳಲ್ಲಿ ಕರ್ತವ್ಯ ನಿರ್ವಹಿಸುವುದರಿಂದ ಅವರಿಗೆ ಮಾಸ್ಕ್ ಗಳ ಅಗತ್ಯ ಹೆಚ್ಚಿರುವುದರಿಂದ ಸಂಚಾರಿ ಪೊಲೀಸರಿಗೆ ಉಜಿರೆ ಪೇಟೆಯಲ್ಲಿ ಎ.3ರಂದು ಬೆಳಗ್ಗೆ ರೋಟರಿ ಕ್ಲಬ್‍ನ ನಿಯೋಜಿತ ಕಾರ್ಯದರ್ಶಿ ಹಾಗೂ ಉಜಿರೆ ಸುರಕ್ಷಾ ಮೆಡಿಕಲ್‍ನ ಶ್ರೀಧರ್ ಕೆ.ವಿ. ಮತ್ತು ಉಜಿರೆ ಉದ್ಯಮಿ ರವಿ ಚಕ್ಕಿತ್ತಾಯ ಅವರು ಬೆಳ್ತಂಗಡಿ ಪೊಲೀಸ್ ಸಂಚಾರಿ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಭಾರತಿ ಅವರಿಗೆ ಉಚಿತವಾಗಿ ಮಾಸ್ಕ್‍ಗಳನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಎಎಸ್‍ಐ ರಾಮಚಂದ್ರ, ತಿಲಕ್ ಹಾಗೂ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.