ಸರಕಾರಿ ಶಾಲಾ ಮಕ್ಕಳಿಗೆ ಅಕ್ಷರ ದಾಸೋಹದ ಅಕ್ಕಿ ವಿತರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಸರಕಾರಿ ಶಾಲೆಯ ಮಕ್ಕಳಿಗೆ ಅಕ್ಷರ ದಾಸೋಹ ಯೋಜನೆಯಲ್ಲಿ ವಿತರಿಸುವ ಅಕ್ಕಿ ಮತ್ತು ಬೇಳೆಯನ್ನು ತಾಲೂಕಿನಲ್ಲಿ ಮಕ್ಕಳ ಪರವಾಗಿ ಪೋಷಕರಿಗೆ ವಿತರಿಸಲಾಯಿತು.

ಎ.3ರಂದು ಗುರುವಾಯನಕೆರೆಯ ಸರಕಾರಿ ಪ್ರೌಢಶಾಲೆಯಲ್ಲಿ ಸರಕಾರದ ಆದೇಶದನ್ವಯ ಅಕ್ಷರ ದಾಸೋಹ ಯೋಜನೆಯ ಸಹಕಾರದಲ್ಲಿ ಮಕ್ಕಳಿಗೆ ವಿತರಿಸುವ 3ಕೆ.ಜಿ 150 ಗ್ರಾಂ ಅಕ್ಕಿ ಹಾಗೂ 1 ಕೆ.ಜಿ. ಬೇಳೆಯನ್ನು ಕುವೆಟ್ಟು ಗ್ರಾ.ಪಂ.ಅಧ್ಯಕ್ಷ ಅಶೋಕ್ ಕೋಟ್ಯಾನ್ ಅವರು ಮಕ್ಕಳ ಪರವಾಗಿ ಅವರ ಪೋಷಕರಿಗೆ ವಿತರಿಸಿದರು.

ಈ ಸಂದರ್ಭದಲ್ಲಿ ಎಸ್‍ಡಿಎಂಸಿ ಉಪಾಧ್ಯಕ್ಷ ಗೋಪಾಲ, ಶಾಲೆಯ ಮುಖ್ಯ ಶಿಕ್ಷಕ ಜಗನ್ನಾಥ್, ಶಿಕ್ಷಕರು, ಬಿಸಿಯೂಟ ಯೋಜನೆ ಕಾರ್ಯಕರ್ತರು ಉಪಸ್ಥಿತರಿದ್ದರು.

ಬಳಂಜ ಶಾಲೆಯಲ್ಲೂ ವಿತರಣೆ:


ಸರಕಾರಿ ಶಾಲೆಯ ಮಕ್ಕಳಿಗೆ ಅಕ್ಷರ ದಾಸೋಹ ಯೋಜನೆಯಲ್ಲಿ ವಿತರಿಸುವ ಅಕ್ಕಿ ಮತ್ತು ಬೇಳೆಯನ್ನು ಮಾ.23ರಂದು ಪಡೆಯದೆ ಬಾಕಿ ಇರುವ ಮಕ್ಕಳಿಗೆ ಎ.3ರಂದು ಬೆಳಗ್ಗೆ 9.30ರಿಂದ 12ಗಂಟೆಯವರೆಗೆ ಶಾಲೆಯಲ್ಲಿ ವಿತರಣೆ ಮಾಡಲಾಯಿತು. ಈ ವೇಳೆ ಶಾಲಾ ಮಕ್ಕಳ ಪರವಾಗಿ ಅವರ ಪೋಷಕರು ಸಾಮಾಜಿಕ ಅಂತರ ಕಾಯ್ದು ಅಕ್ಕಿಯ ಪಡೆದುಕೊಂಡರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.