ಮದ್ಯ ಸಿಗದೆ ನಿತ್ರಾಣಗೊಂಡಿದ್ದ ಮಡಂತ್ಯಾರಿನ ವ್ಯಕ್ತಿ ಸಾವು!

ಮದ್ಯ ಸಿಗದೆ ನಿತ್ರಾಣಗೊಂಡಿದ್ದ ಮಡಂತ್ಯಾರಿನ ವ್ಯಕ್ತಿ ಪುಂಜಾಲಕಟ್ಟೆ ಆಸ್ಪತ್ರೆಯಲ್ಲಿ ಮೋಹನ ಭಂಡಾರಿ ಎಂಬವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ತಾಲೂಕಿನ ಕುಕ್ಕಳ ಗ್ರಾಮದ ಅನಿಲಡೆ ನಿವಾಸಿ ದಿ.ಫಕೀರ ಭಂಡಾರಿ ಅವರ ಪುತ್ರ ಮೋಹನ ಭಂಡಾರಿ (೪೦ವ.) ಅವರು ಹೃದಯಾಘಾತದಿಂದ ಮೃತಪಟ್ಟವರು.

ಕೂಲಿ ಕಾರ್ಮಿಕರಾಗಿದ್ದ ಮೋಹನ ಅವಿವಾಹಿತರಾಗಿದ್ದರು. ಮದ್ಯ ವ್ಯಸನ ಚಟ ಅಂಟಿಸಿಕೊಂಡಿದ್ದ ಅವರು ಈ ಹಿಂದೆಯೇ ಅನಾರೋಗ್ಯದಿಂದ ಬಳಲುತ್ತಿದ್ದರು ಇದೀಗ ಲಾಕ್‌ಡೌನ್ ಬಳಿಕ ಎಲ್ಲೂ ಮದ್ಯ ದೊರಕದೆ, ಔಷಧವನ್ನೂ ಸೇವಿಸದೆ ನಿತ್ರಾಣಗೊಂಡಿದ್ದರು ಎಂದು ಅವರು ಮನೆಯವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.