ನೆರಿಯ ನದಿಗೆ ವಿಷ ಹಾಕಿದ ಪ್ರಕರಣ: ಶಂಕಿತ ಮೂವರು ಪೊಲೀಸ್ ವಶಕ್ಕೆ?

ನೆರಿಯ: ನೆರಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಲ್ನ ನದಿ ಕಿನಾರೆಯಲ್ಲಿ ಕಿಡಿಗೇಡಿಗಳು ನದಿಗೆ ವಿಷ ಹಾಕಿದ್ದರಿಂದ ಹಲವಾರು ಮೀನುಗಳು ಮತ್ತು ರಾಷ್ಟ್ರ ಪಕ್ಷಿ ನವಿಲೊಂದು ಸಾವನ್ನಪ್ಪಿದ ಘಟನೆಯ ಬಗ್ಗೆ ತನಿಖೆ ಚುರುಕುಗೊಂಡಿದೆ. ಈ ಸಂಬಂಧ ಧರ್ಮಸ್ಥಳ ಪೊಲೀಸರು ಶಂಕಿತ ಮೂರು ಮಂದಿಯನ್ನು ವಿಚಾರಣೆಗಾಗಿ ಇಂದು ವಶಕ್ಕೆ ಪಡೆದಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಮಾ.೩೦ರಂದು ರಾತ್ರಿ ಕಿಡಿಗೇಡಿಗಳು ನದಿ ನೀರಿಗೆ ವಿಷ ಹಾಕಿದ್ದರಿಂದ ಸುಮಾರು ೨ ಕಿ.ಮೀ. ವ್ಯಾಪ್ತಿಯ ಮೀನುಗಳು ಸಾವನ್ನಪ್ಪಿತ್ತು. ಸದ್ರಿ ಹೊಳೆಯ ನೀರನ್ನು ಕುಡಿದ ನವಿಲು ಸಾವನ್ನಪ್ಪಿತ್ತು. ಸ್ಥಳಕ್ಕೆ ಇಂದು ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿ ತನಿಖೆ ಕೈಗೊಂಡಿದೆ. ಸ್ಥಳ ಮಹಜರು, ಮೀನು ಮತ್ತು ನವಿಲಿನ ಮರಣೋತ್ತರ ಪರೀಕ್ಷೆ ಕ್ರಮ ಕೈಗೊಂಡಿದ್ದಾರೆ.

ಪೊಲೀಸರು ಮಹಜರು ನಡೆಸುವ ವೇಳೆ ದೂರುದಾರರನ್ನು ಆಹ್ವಾನಿಸಿದ್ದು, ದೂರು ನೀಡುವಾಗ ಸ್ಥಳೀಯ ಮೂರು ಮಂದಿಯ ಹೆಸರು ದಾಖಲಿಸಿ ದೂರು ನೀಡಿದ್ದರೂ ಪೊಲೀಸರ ಪ್ರಥಮ ವರ್ತಮಾನ ವರದಿಯಲ್ಲಿ ಅವರ ಹೆಸರನ್ನು ಕೈಬಿಡಲಾಗಿದೆ ಎಂದು ಸ್ವಲ್ಪ ಹೊತ್ತು ಚರ್ಚೆಗಳು ನಡೆದ ವಿದ್ಯಮಾನವೂ ನಡೆಯಿತು. ಧರ್ಮಸ್ಥಳ ಪೊಲೀಸರ ಈ ಕ್ರಮವನ್ನು ವಿರೋಧಿಸಿದ ದೂರುದಾರರು ಎಸ್.ಪಿ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದ ಹಿನ್ನೆಲೆಯಲ್ಲಿ ಎಸ್.ಪಿ ಅವರ ನಿರ್ದೇಶನದಂತೆ ಇದೀಗ ಎಸ್.ಐ ಅವರು ಸ್ಥಳೀಯ ಮೂರು ಮಂದಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.