ಶ್ರೀ ರಾಮ ಕ್ಷೇತ್ರದಲ್ಲಿ ರಾಮ ನವಮಿ ಪ್ರಯುಕ್ತ ಧಾರ್ಮಿಕ ವಿಧಿವಿಧಾನಗಳು ಮಾತ್ರ ಸಂಪನ್ನ

ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಮ್ ನಿತ್ಯಾನಗರ ಧರ್ಮಸ್ಥಳ ಇಲ್ಲಿ ಶ್ರೀ ರಾಮ ನವಮಿಯ ದಿನದ ಕಾರ್ಯಕ್ರಮಕ್ಕೆ ಜೊತೆಯಾಗಿ ಪ್ರತಿಷ್ಠಾ ಜಾತ್ರಾ ಮಹೋತ್ಸವದ ಸರಳ ಭಾಗವಾಗಿ ಇಂದು ಧಾರ್ಮಿಕ ಕಾರ್ಯಕ್ರಮಗಳು ಮಾತ್ರ ಕ್ಷೇತ್ರದಲ್ಲಿ ಇಂದು ನಡೆಯಿತು.

ಕ್ಷೇತ್ರದ ಪೀಠಾಧಿಪತಿಗಳಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ನೇತೃತ್ವ ನೀಡಿದರು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಇಂದು ಕ್ಷೇತ್ರದಲ್ಲಿ ನಡೆಯಬೇಕಾದ ಧಾರ್ಮಿಕ ಕಟ್ಟುಪಾಡುಗಳನ್ನು ಮಾತ್ರ ನಡೆಸಲಾಗಿದ್ದು, ಸ್ವಾಮೀಜಿಗಳಲ್ಲದೆ ಕ್ಷೇತ್ರದ ಸಮಿತಿಯ ಸಿಬ್ಬಂದಿಗಳು,ಮತ್ತು ಅರ್ಚಕರು ಉಪಸ್ಥಿತರಿದ್ದರು.
ಪ್ರಾತಃ ಕಾಲದಿಂದ ಸುಪ್ರಬಾತ, ವೇದಘೋಷ, ವಿಷ್ಣು ಸಹಸ್ರನಾಮ ಹೋಮ, ವಾಗ್ದೇವಿ ಯಜ್ಞ, ಪ್ರಾಯಶ್ಚಿತ್ತ ಹೋಮ, ಶಾಂತಿ ಹೋಮ ಇತ್ಯಾಧಿಗಳು ಶಾಸ್ತ್ರೋಕ್ತವಾಗಿ ನಡೆದವು. ಶ್ರೀ ರಾಮನವಮಿ ಪ್ರಯುಕ್ತ ಗಣಪತಿ ಹೋಮ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.