HomePage_Banner_
HomePage_Banner_
HomePage_Banner_

ದ.ಕ‌ ಜಿಲ್ಲೆಯಲ್ಲಿ ನಾಳೆಯಿಂದ 12 ಗಂಟೆವರೆಗೆ ಅಗತ್ಯ ಸಾಮಾಗ್ರಿಗಳು ಲಭ್ಯ

ದ.ಕ. ಜಿಲ್ಲೆಯಲ್ಲಿ ನಾಳೆಯಿಂದ ಎಲ್ಲಾ ದಿನಸಿ ಅಂಗಡಿ, ತರಕಾರಿ, ಹಣ್ಣಿನ ಅಂಗಡಿಗಳು ಬೆಳಿಗ್ಗೆ ೭ ರಿಂದ ಮಧ್ಯಾಹ್ನ ೧೨ ಗಂಟೆಯವರೆಗೆ ತೆರೆದಿರುತ್ತದೆ ಎಂದು ಪ್ರಕಟಣೆಯಾಗಿದೆ.

ಹಾಲು, ಔಷಧಿ ಅಂಗಡಿ, ಗ್ಯಾಸ್ ವಿತರಣೆ, ಪೆಟ್ರೋಲ್ ಬಂಕ್, ಬ್ಯಾಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ.

ಪೆಟ್ರೋಲ್ ಬಂಕ್‌ನಲ್ಲಿ ಖಾಸಗಿ ವಾಹನಗಳಿಗೆ ಬೆಳಿಗ್ಗೆ ೭ ರಿಂದ ೧೨ ರವರೆಗೆ ಮಾತ್ರ ಸೇವೆ. ಗೂಡ್ಸ್ ವಾಹನಗಳಿಗೆ ಇಡೀ ದಿನ ಸೇವೆ.

ದೊರೆಯಲಿದೆ. ನಾಳೆಯಿಂದ ಮಧ್ಯಾಹ್ನ ೧೨ ಗಂಟೆಯ ನಂತರ ವಿನಾಕಾರಣ ಸಂಚರಿಸುವ ಖಾಸಗೀ ವಾಹನಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ಜಿಲ್ಲಾಡಳಿತ ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಿದೆ.
ಅಗತ್ಯ ಸಾಮಾಗ್ರಿಗಳ ಮಳಿಗೆಗಳು ತೆರೆದಿರುತ್ತದೆ ಎಂದು ಜನರು ಬೇಕಾಬಿಟ್ಟಿ ಪೇಟೆ ಪಟ್ಟಣ ತಿರುಗಾಡುವಂತಿಲ್ಲ. ಆರೋಗ್ಯವಂತ ಒಬ್ಬರು ಮಾತ್ರ ಏನಾದರೂ ತುರ್ತು ಅಗತ್ಯತೆ ಇರುವ ವಸ್ತುಗಳ ಖರೀದಿಗೆ ಬಂದು ಹೋಗುವ ಅವಕಾಶ ಇದೆ. ಇದು ಬಂದ್ ಹೊರತುಪಡಿಸಿದ ತೀರ್ಮಾನವಾಗಿದ್ದು, ಈಗಾಗಲೇ ದೇಶಾಧ್ಯಂತ ಪ್ರಧಾನಿಯವರು ಕರೆನೀಡಿದ ಲಾಕ್‌ಡೌನ್ ನಿಯಮಾವಳಿಯಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ ಎಂದು ತಿಳಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.